ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೊಟೇಲ್ ನಲ್ಲಿ ಪೇಪರ್‌ನಲ್ಲಿ ಬಜ್ಜಿ ಕಟ್ಟಿಸಿಕೊಂಡು ಬರ್ತಿರಾ..? ಹಾಗಿದ್ರೆ ಈ ಸುದ್ದಿ ಓದಿ..!

09:03 AM Oct 25, 2024 IST | BC Suddi
Advertisement

ಜನರು ಬಿಸಿ ಆಹಾರವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇಡುವುದನ್ನು ತಪ್ಪಿಸುತ್ತಾರೆ. ಏಕೆಂದರೆ ಈ ಮೂಲಕ ಮೈಕ್ರೋಪ್ಲಾಸ್ಟಿಕ್ ನಮ್ಮ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಇದು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳನ್ನು ಉಂಟುಮಾಡುತ್ತದೆ ಎಂದು ಹೀಗೆ ಮಾಡುತ್ತಾರೆ.

Advertisement

ಬಹಳಷ್ಟು ಜನರು ಪಾಲಿಥಿನ್‌ ಪ್ಲಾಸ್ಟಿಕ್‌ ಚೀಲಗಳಿಗಿಂತ ಪತ್ರಿಕೆಗಳನ್ನು ಉತ್ತಮವೆಂದು ತಿಳಿದು, ಪೇಪರ್‌ ಬ್ಯಾಗ್‌ಗಳನ್ನೂ ಬಳಸುತ್ತಾರೆ. ಆದರೆ ಪತ್ರಿಕೆಗಳಲ್ಲಿ ಸುತ್ತುವ ಆಹಾರವೂ ಸುರಕ್ಷಿತವಲ್ಲ. ಇದು ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತದೆ ಎಂಬುದು ನಿಮಗೆ ಗೊತ್ತಾ.? ಕರಿದ ಆಹಾರವನ್ನು ಪೇಪರ್‌ನಲ್ಲಿ ಕಟ್ಟಿದಾಗ, ಅದರಲ್ಲಿ ಇರುವ ರಾಸಾಯನಿಕಗಳು ಮತ್ತು ಶಾಯಿ ಪಕೋಡದೊಂದಿಗೆ ನಿಮ್ಮ ಹೊಟ್ಟೆ ಸೇರುತ್ತದೆ. ಈ ವೃತ್ತಪತ್ರಿಕೆಗಳು ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ನಿಮಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ.

ಪೇಪರ್‌ ತಯಾರಿಸುವಾಗ ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಹಲವಾರು ರಾಸಾಯನಿಕಗಳು ಭಾಗಿಯಾಗುತ್ತವೆ. ಅವುಗಳು ಧೂಳು, ಬ್ಯಾಕ್ಟೀರಿಯಾ ಮತ್ತು ಇತರ ಕಲ್ಮಶಗಳನ್ನೂ ಒಳಗೊಂಡಿರಬಹುದು. ಇದು ಆಹಾರದಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಪೆಟ್ರೋಲಿಯಂ ಆಧಾರಿತ ಖನಿಜ ತೈಲಗಳನ್ನು ಪೇಪರ್ ಮೇಲೆ ಶಾಯಿಯನ್ನು ದಪ್ಪವಾಗಿಸಲು ಬಳಸಲಾಗುತ್ತದೆ. ಅದನ್ನು ಒಣಗಿಸಲು ಕೋಬಾಲ್ಟ್ ಆಧಾರಿತ ಏಜೆಂಟ್‌ಗಳನ್ನು ಬಳಸಲಾಗುತ್ತದೆ. ಈ ಎರಡನ್ನೂ ಸೇವಿಸಿದರೆ, ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ.

ಮ್ಯಾಗಜೈನ್‌ಗಳ ಪುಟಗಳು ಗುಣಮಟ್ಟದಲ್ಲಿ ಉತ್ತಮ ಎಂದು ನೀವು ಭಾವಿಸಿದರೆ, ಅದೂ ತಪ್ಪು. ಇವುಗಳ ಪುಟಗಳ ಹೊಳಪನ್ನು ಸೇರಿಸಲು ಮತ್ತು ಶಾಯಿಯನ್ನು ಮಬ್ಬಾಗದಂತೆ ತಡೆಯಲು ಬಳಸುವ ರಾಸಾಯನಿಕಗಳು ಇನ್ನಷ್ಟು ಅಪಾಯವನ್ನುಂಟು ಮಾಡುತ್ತವೆ. ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ಅಂಶಗಳಿವೆ, ಕಡಿಮೆ ದರ್ಜೆಯ ಸಸ್ಯಜನ್ಯ ಎಣ್ಣೆ (ಹೆವಿ ಆಯಿಲ್) ಮತ್ತು ಬಿಟುಮೆನ್ ಪಿಗ್ಮೆಂಟ್. ಇವುಗಳು ಆಹಾರದ ಮೂಲಕ ಹೊಟ್ಟೆಯನ್ನು ಪ್ರವೇಶಿಸಿದರೆ ನಮಗೆ ಆರೋಗ್ಯ ಸಮಸ್ಯೆ ಕಾಡುತ್ತದೆ.

ಹೀಗಾಗಿ ಪೇಪರೇ ಬಳಸಬೇಕು ಎಂದಿದ್ದರೆ ಪ್ರಿಂಟ್‌ ಆಗಿರದ ಖಾಲಿ ಪೇಪರು ಉತ್ತಮ. ಕರಿದ ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಬಳಸುವ ಟಿಶ್ಯೂ ಪೇಪರ್‌ಗಳು ಅಥವಾ ಪೇಪರ್ ಟವೆಲ್‌ಗಳನ್ನು ಬಳಸುವುದು ಉತ್ತಮ. ದಿನಪತ್ರಿಕೆಗಳ ಬದಲು ಟಿಶ್ಯೂ ಪೇಪರ್‌ನಲ್ಲಿ ಆಹಾರ ಪ್ಯಾಕ್ ಮಾಡಬಹುದು. ಮನೆಯಿಂದ ಸ್ಟೀಲ್ ಪಾತ್ರೆ ತಂದು ಅದರಲ್ಲಿ ಆಹಾರವನ್ನು ಇಡುವುದು ಉತ್ತಮ.

Advertisement
Next Article