For the best experience, open
https://m.bcsuddi.com
on your mobile browser.
Advertisement

ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಬರೆದು ಐ ಎಎಸ್ ಅಧಿಕಾರಿಯಾದ ಶ್ರದ್ಧಾ ಶುಕ್ಲಾ

09:24 AM Oct 09, 2024 IST | BC Suddi
ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಬರೆದು ಐ ಎಎಸ್ ಅಧಿಕಾರಿಯಾದ ಶ್ರದ್ಧಾ ಶುಕ್ಲಾ
Advertisement

ರಾಯ್‌ಪುರ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಈ ಪರೀಕ್ಷೆಯನ್ನು ಪಾಸ್ ಆಗಲು ಬಹುತೇಕ ವಿದ್ಯಾರ್ಥಿಗಳು ತರಬೇತಿ ಕೇಂದ್ರಗಳಿಗೆ ಹಣ ವ್ಯಹಿಸುತ್ತಾರೆ. ಆದರೆ ಇಲ್ಲೊಬ್ಬರು ಯಾವುದೇ ತರಬೇತಿ ಕೇಂದ್ರಗಳಿಗೆ ಸೇರದೇ ಆನ್‌ಲೈನ್ ಅಧ್ಯಯನ ನಡೆಸಿ ಐ ಎಎಸ್ ಅಧಿಕಾರಿಯಾದ ಶ್ರದ್ಧಾ ಶುಕ್ಲಾ ಯಶೋಗಾಥೆ.

ರಾಯ್‌ಪುರದಲ್ಲಿ ಜನಿಸಿದ ಶ್ರದ್ಧಾ ಶುಕ್ಲಾ ಅವರು MGM ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯ ಪದವಿ ಕಾಲೇಜಿನಿಂದ BSc ಮತ್ತು MSc ಶಿಕ್ಷಣವನ್ನು ಪಡೆದರು.

ಇನ್ನು ಬ್ಯಾಲದಿಂದಲೂ ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ಕನಸು ಹೊಂದಿದ್ದ ಶ್ರದ್ಧಾ ಅವರು ಪದವಿ ಮುಗಿದ ನಂತರ ದೆಹಲಿಯ ಪಾರ್ಥ್ ಅಕಾಡೆಮಿಯಿಂದ UPSC ಗಾಗಿ ತಯಾರಿ ನಡೆಸಲು ಆರಂಭಿಸಿದರು.

Advertisement

ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಮುಂದಾದ ಶ್ರದ್ಧಾ ಶುಕ್ಲಾ ಅವರು ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಂದ ಕೋಚಿಂಗ್ ಪಡೆಯದೇ ಆನ್‌ಲೈನ್ ಅಧ್ಯಯನ ಮೂಲಕ ಸಿದ್ದತೆಯನ್ನು ನಡೆಸಿದರು.

ಇನ್ನು ಪರೀಕ್ಷೆ ಬರೆಯಲು ಮುಂದಾದ ಶ್ರದ್ಧಾ ಶುಕ್ಲಾ ಅವರಿಗೆ ಮೊದಲ ಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಆದರೆ ಶ್ರದ್ಧಾ ಅವರು ಛಲ ಬೀಡದೇ ಮರು ಯತ್ನಿಸಿ ಎರಡನೇ ಪ್ರಯತ್ನದಲ್ಲಿ 45 ನೇ ರ್‍ಯಾಂಕ್ ಪಡೆದು IAS ಅಧಿಕಾರಿಯಾಗುವ ಮೂಲಕ ಯಶಸ್ಸು ಕಂಡು ಇತರರಿಗೆ ಪ್ರೇರಣೆಯಾದರು.

Author Image

Advertisement