ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪತಿ ಜೊತೆ ಒಂದಾಗುವ ಸುಳಿವು ನೀಡಿದ ಆಲಿಯಾ ಸಿದ್ದಿಕಿ

11:59 AM Mar 27, 2024 IST | Bcsuddi
Advertisement

ಮುಂಬೈ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ ಸಿದ್ದಿಕಿ ಸಂಸಾರದ ರಂಪಾಟ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು.

Advertisement

ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು ಪತಿ ಬಗ್ಗೆ ಆಲಿಯಾ ದೂರಿದ್ರು. ಇದೀಗ ಪತಿ ನವಾಜುದ್ದೀನ್ ಸಿದ್ದಿಕಿ ಜೊತೆ ಆಲಿಯಾ ಒಂದಾಗುವ ಸುಳಿವು ನೀಡಿದ್ದಾರೆ.

ಆಲಿಯಾ ಸಿದ್ದಿಕಿ ಮದುವೆಯಾಗಿ 14 ವರ್ಷ ಪೂರೈಸಿದ್ದು, ಇದೀಗ ಪತಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ. 14 ವರ್ಷಗಳ ದಾಂಪತ್ಯದ ಸಂಭ್ರಮ ಎಂದು ಅಡಿಬರಹ ಬರೆದು ಪತಿ ಮತ್ತು ಮಕ್ಕಳ ಜೊತೆಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.

ಇಬ್ಬರ ದಾಂಪತ್ಯ ಬಿರುಕು ಮೂಡಿದೆ ಎಂಬುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಪತಿ ಜೊತೆಗಿನ ಮನಸ್ತಾಪದ ಬಳಿಕ ಮಕ್ಕಳ ಜೊತೆ ಆಲಿಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಇದೀಗ ಮದುವೆ ವಾರ್ಷಿಕೋತ್ಸವ ಕುರಿತು ಪೋಸ್ಟ್ ಶೇರ್ ಮಾಡುತ್ತಿದ್ದಂತೆ, ಇಬ್ಬರೂ ಒಂದಾಗುವ ಸೂಚನೆ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಆದರೆ ಇಬ್ಬರ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 

 

Advertisement
Next Article