For the best experience, open
https://m.bcsuddi.com
on your mobile browser.
Advertisement

ನನ್ನ ಗಂಡ ಸಲಿಂಗ ಕಾಮಿ ಎಂದ ಗಾಯಕಿ : ಹೌದು ನಾನು ಸಲಿಂಗಕಾಮಿಯೇ! ಎಂದ ನಟ ಕಾರ್ತಿಕ್

12:04 PM May 16, 2024 IST | Bcsuddi
ನನ್ನ ಗಂಡ ಸಲಿಂಗ ಕಾಮಿ ಎಂದ ಗಾಯಕಿ   ಹೌದು ನಾನು ಸಲಿಂಗಕಾಮಿಯೇ  ಎಂದ ನಟ ಕಾರ್ತಿಕ್
Advertisement

ಚೆನ್ನೈ: ಗಂಡನನ್ನೇ ಸಲಿಂಗ ಕಾಮಿ ಎಂದ ಗಾಯಕಿ ಮಾಜಿ ಪತ್ನಿ ಸುಚಿತ್ರಾ ಹೇಳಿಕೆಗೆ ನಟ ಕಾರ್ತಿಕ್​ ಖಡಕ್ ಉತ್ತರ ನೀಡಿದ್ದಾರೆ. ಹೌದು, ನಾನೊಬ್ಬ ಸಲಿಂಗಕಾಮಿ​! ಈ ರೀತಿ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂದಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಕಾರ್ತಿಕ್​, ನಾನು ಸಲಿಂಗಕಾಮಿ ಆಗಿದ್ದರೆ, ನಾನು ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನಾಚಿಕೆಪಡುವುದಿಲ್ಲ. ಅಸ್ತಿತ್ವದಲ್ಲಿರುವ ಯಾವುದೇ ರೀತಿಯ ಲೈಂಗಿಕತೆಯ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಯಾವುದೇ ಕಾರಣಕ್ಕೂ ನಾನು ನಾಚಿಕೆ ಪಡುವುದಿಲ್ಲ. ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ರೀತಿಯ ರ್‍ಯಾಲಿ ನಡೆದರೆ ನಾನು ಹೆಮ್ಮೆಯಿಂದ ಭಾಗವಹಿಸುತ್ತೇನೆ. ಇಲ್ಲಿ ಅವಮಾನ ಅಂತಾ ಏನೂ ಇಲ್ಲ. ಕೇವಲ ಹೆಮ್ಮೆ ಇದೆ ಅಷ್ಟೇ ಎಂದು ಹೇಳುವ ಮೂಲಕ ತನ್ನ ಮಾಜಿ ಪತ್ನಿ ಸುಚಿತ್ರಾಗೆ ಕಾರ್ತಿಕ್​ ತಿರುಗೇಟು ನೀಡಿದ್ದಾರೆ.

Author Image

Advertisement