ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಾರಿ ತಪ್ಪಿ ಬಂದ ತಮಿಳುನಾಡಿನ ಮೀನುಗಾರಿಕಾ ಬೋಟ್ ನೌಕಾಪಡೆ ವಶಕ್ಕೆ

09:15 AM Oct 22, 2023 IST | Bcsuddi
Advertisement

ಕಾರವಾರ: ಇಲ್ಲಿನ ಬೈಕ್​ಕೋಲ್ ನೌಕಾನೆಲೆಗೆ ತಮಿಳುನಾಡಿನ ಮೀನುಗಾರಿಕಾ ಬೋಟ್​ ಒಂದು ದಾರಿ ತಪ್ಪಿ ಬಂದಿದ್ದು ನೌಕಾಪಡೆ ವಶಕ್ಕೆ ಪಡೆದುಕೊಂಡಿದೆ.

Advertisement

ದಾರಿ ತಪ್ಪಿ ಬಂದ ಈ ಬೋಟ್ ನಲ್ಲಿ ಐಸ್ ಖಾಲಿಯಾಗಿರಲಿಲ್ಲ. ಈ ಹಿನ್ನೆಲೆ ಬೋಟ್ ಬಂದರಿಗೆ ಬರಬೇಕಿತ್ತು. ಆದರೆ ಬೋಟ್ ನ ಜಿಪಿಎಸ್ ಬಂದರಿಗೆ ಬರಲು ಸರಿಯಾದ ತೋರಿಸುವಲ್ಲಿ ವಿಫಲವಾಗಿದೆ. ಪರಿಣಾಮ ಮೀನುಗಾರಿಕಾ ಬಂದರಿಗೆ ತೆರಳುವ ಬದಲು ನೌಕಾನೆಲೆಗೆ ನುಗ್ಗಿದೆ. ಬಳಿಕ ನೌಕಾಪಡೆ ಸಿಬ್ಬಂದಿಯು ಮೀನುಗಾರಿಕಾ ಬೋಟ್​ನಲ್ಲಿದ್ದವರ ಆಧಾರ್ ಕಾರ್ಡ್, ದಾಖಲೆ ಪರಿಶೀಲಿಸಿ ನಂತರ ಕರಾವಳಿ ಪಡೆಗೆ ಒಪ್ಪಿಸಿದ್ದಾರೆ.

ಇನ್ನು ಕರಾವಳಿ ಕಾವಲು ಪಡೆ ದಾಖಲೆ ಪರಿಶೀಲಿಸಿ ಬಿಡುಗಡೆ ಬಗ್ಗೆ ತೀರ್ಮಾನಿಸಿದೆ.

Advertisement
Next Article