For the best experience, open
https://m.bcsuddi.com
on your mobile browser.
Advertisement

ಜಿಲ್ಲೆಯಾದ್ಯಂತ 80 ಮನೆಗಳು ಭಾಗಶಃ ಹಾನಿ.! ಜಿಲ್ಲೆಯಲ್ಲಿ 11.3 ಮಿ.ಮೀ ಮಳೆ

05:53 PM Oct 18, 2024 IST | BC Suddi
ಜಿಲ್ಲೆಯಾದ್ಯಂತ 80 ಮನೆಗಳು ಭಾಗಶಃ ಹಾನಿ   ಜಿಲ್ಲೆಯಲ್ಲಿ 11 3 ಮಿ ಮೀ ಮಳೆ
Advertisement

ಚಿತ್ರದುರ್ಗ: ಗುರುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 11.3 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 15 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 6.8 ಹಿರಿಯೂರು ತಾಲ್ಲೂಕು 14.2 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 13 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 6.8 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 9.6 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 10.9 ಮಿ.ಮೀ, ನಾಯಕನಹಟ್ಟಿ 24.1 ಮಿ.ಮೀ, ಪರಶುರಾಂಪುರ 15.4 ಮಿ.ಮೀ, ತಳಕು 11.4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 5.2 ಮಿ.ಮೀ, ಭರಮಸಾಗರ 10.1 ಮಿ.ಮೀ, ಹಿರೇಗುಂಟನೂರು 10.8 ಮಿ.ಮೀ, ತುರುವನೂರು 3.2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 23 ಮಿ.ಮೀ,  ಐಮಂಗಲ 20.7 ಮಿ.ಮೀ, ಧರ್ಮಪುರ 9.3 ಮಿ.ಮೀ, ಜವನಗೊಂಡನಹಳ್ಳಿ 5.5 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 22.2 ಮಿ.ಮೀ, ಬಿ.ದುರ್ಗ 9 ಮಿ.ಮೀ, ರಾಮಗಿರಿ 22 ಮಿ.ಮೀ, ತಾಳ್ಯ 2.5 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 20.3 ಮಿ.ಮೀ, ಮಾಡದಕೆರೆ 2 ಮಿ.ಮೀ, ಮತ್ತೋಡು 0.3 ಮಿ.ಮೀ, ಶ್ರೀರಾಂಪುರ 1 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 8.5 ಮಿ.ಮೀ ಹಾಗೂ ದೇವಸಮುದ್ರದಲ್ಲಿ 10.9 ಮಿ.ಮೀ ಮಳೆಯಾಗಿದೆ.

Advertisement

80 ಮನೆಗಳು ಭಾಗಶಃ ಹಾನಿ:  ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 80 ಮನೆಗಳು ಭಾಗಶಃ ಹಾನಿಯಾಗಿದ್ದು, 3 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 24 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ 15 ಮನೆಗಳು, ಹೊಳಲ್ಕೆರೆ 14 ಮನೆಗಳು, ಹೊಸದುರ್ಗ 5 ಮನೆಗಳು ಭಾಗಶಃ ಹಾನಿ ಹಾಗೂ 3 ಮನೆಗಳಿಗೆ ನೀರು ನುಗ್ಗಿವೆ. ಹಿರಿಯೂರು ತಾಲ್ಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

Tags :
Author Image

Advertisement