For the best experience, open
https://m.bcsuddi.com
on your mobile browser.
Advertisement

 ಎಂ.ಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ ವಿರುದ್ಧ ಕೇಸ್ ದಾಖಲು.!

05:50 PM Oct 18, 2024 IST | BC Suddi
 ಎಂ ಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ ಸೋದರಿ ವಿರುದ್ಧ ಕೇಸ್ ದಾಖಲು
Advertisement

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ದೇವಾನಂದ ಪುಲ್ ಸಿಂಗ್ ಚೌಹ್ಹಾಣ್ ಅವರಿಗೆ ಪ್ರಹ್ಲಾದ್ ಜೋಷಿ ಅವರು  ಪ್ರಭಾವ ಬಳಸಿ  ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹೋದರ ಗೋಪಾಲ ಜೋಷಿ ಮತ್ತು ಸಹೋದರಿ ವಿಜಯ್ ಲಕ್ಷ್ಮಿ ಜೋಷಿ ಹಾಗೂ ಗೋಪಾಲ್ ಜೋಷಿ ಮಗ ಅಜಯ್ ಜೋಷಿ ಭರವಸೆ ನೀಡಿ ಹಣ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ಅವರು  ಪೊಲೀಸರಿಗೆ ದೂರು ನೀಡಿದ್ದಾರೆ.

ನೊಂದ ಮಹಿಳೆ ಸುನೀತಾ ಚೌಹ್ಹಾಣ್ ಅವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಹ್ಲಾದ್ ಜೋಷಿ ಸೋದರ ಗೋಪಾಲ ಜೋಷಿ, ಸೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ ಜೋಷಿ ಮಗ ಅಜಯ್ ಜೋಷಿ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು  ದಿನಾಂಕ 17-10-2024ರ ಸಂಜೆ ಐದು ಗಂಟೆಗೆ ಎಫ್ ಐಆರ್ ದಾಖಲಿಸಿದ್ದಾರೆ.

Advertisement

ಲಂಬಾಣಿ ಸಮುದಾಯಕ್ಕೆ ಸೇರಿರುವ ದೇವಾನಂದ್ ಸಿಂಗ್ ಅವರು 2018ರಲ್ಲಿ ಬಿಜಾಪುರ ಜಿಲ್ಲೆಯ ನಾಗಠಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 2023ರಲ್ಲಿ ಸೋತಿದ್ದರು.

ಸುನೀತಾ ಚೌಹ್ಹಾಣ್ ಅವರಿಂದ ಮೊದಲು 25 ಲಕ್ಷ ಪಡೆದಿದ್ದ ಗೋಪಾಲ್ ಜೋಷಿ  ಆ ಹಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರ ಸೆಕ್ರೆಟರಿಗೆ ನೀಡಿದ್ದು ನನ್ನ ತಮ್ಮ (ಪ್ರಹ್ಲಾದ್ ಜೋಷಿ)ನ ವರ್ಚಸ್ಸು ಚೆನ್ನಾಗಿದೆ, ಅವನ ಮಾತನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಹಾ ಇಬ್ಬರೂ ಕೇಳುತ್ತಾರೆ, ಟಿಕೆಟ್ ಗ್ಯಾರಂಟಿ ಎಂದು ಭರವಸೆ ನೀಡಿದ್ದರಂತೆ ಹಾಗಾಗಿ ಹಣ ನೀಡಿದ್ದಾರೆ.

ಅದರ ನಂತರ ದುಡ್ಡ ವಾಪಸ್ ಕೇಳಲು ಹೊರಟರೆ ವಿಜಯ್ ಲಕ್ಷ್ಮಿ ಮತ್ತು ಅಜಯ್ ಜೋಷಿ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಲ್ಲದೆ ಜಾತಿ ನಿಂದನೆ ಕೂಡಾ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ದೂರಿನಲ್ಲಿ ತಿಳಿಸಿದ್ದಾರೆ.

Tags :
Author Image

Advertisement