For the best experience, open
https://m.bcsuddi.com
on your mobile browser.
Advertisement

ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ: ಇಪಿಎಫ್‌ಒದಿಂದ ಗರಿಷ್ಠ ವೇತನ ಮಿತಿ ಹೆಚ್ಚಳ

05:51 PM Apr 12, 2024 IST | Bcsuddi
ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ  ಇಪಿಎಫ್‌ಒದಿಂದ ಗರಿಷ್ಠ ವೇತನ ಮಿತಿ ಹೆಚ್ಚಳ
Advertisement

ಇಪಿಎಫ್‌ಒ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಡಿಯಲ್ಲಿ ಉದ್ಯೋಗಿಗಳ ಗರಿಷ್ಠ ವೇತನ ಮಿತಿಯನ್ನು ಹೆಚ್ಚಿಸಲು ಕೇಂದ್ರವು ಯೋಜಿಸುತ್ತಿದೆ.

ಸದ್ಯ 15 ಸಾವಿರ ರೂ. ಇದ್ದು ಅದು 21 ಸಾವಿರಕ್ಕೆ ಏರಿಕೆಯಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಇದನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ.

ಹೊಸದಾಗಿ ರಚನೆಯಾದ ಸರ್ಕಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

Advertisement

Author Image

Advertisement