ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

35 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ! ಈ ಮಾಡೆಲ್ ನಿಮ್ಮಲ್ಲಿ ಇದೆಯಾ?

04:00 PM Jun 29, 2024 IST | Bcsuddi
Advertisement

ವ್ಯಾಟ್ಸಾಪ್ ಇಲ್ಲದೆ ಜೀವನ ಮುಂದೆ ಸಾಗದಷ್ಟು ಅವಲಂಬಿತರಾಗಿದ್ದೇವೆ. ಆದರೆ ಶೀಘ್ರದಲ್ಲೇ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಈ 35 ಫೋನ್ ಯಾವುದು? ನಿಮ್ಮ ಫೋನ್ ಈ ಲಿಸ್ಟ್‌ನಲ್ಲಿದೆಯಾ ಚೆಕ್ ಮಾಡಿ.

Advertisement

ವಾಟ್ಸಾಪ್ ನೋಡದೆ ಒಂದು ದಿನ ಕಳೆದಿದ್ದೇವೆ ಎಂದರೆ ಅದುವೇ ದೊಡ್ಡ ಸಾಧನೆ, ಹಾಗಾಗಿದೆ ನಮ್ಮ ಬದುಕು. ವಾಟ್ಸಾಪ್‌ ಮೂಲಕವೇ ನಾವು ಮಾತನಾಡುತ್ತೇವೆ, ವೀಡಿಯೋ ಕಾಲ್ ಮಾಡುತ್ತೇವೆ, ಆಫೀಸ್‌ ಕೆಲಸಕ್ಕೆ ಅಂತ ವಾಟ್ಸಾಪ್‌ ಗ್ರೂಪ್ ಇರುತ್ತದೆ, ಎಷ್ಟೋ ಜನ ತಮ್ಮ ಬ್ಯುಸ್‌ನೆಸ್ ವ್ಯವಹಾರವನ್ನು ಕೂಡ ವಾಟ್ಸಾಪ್‌ ಮೂಲಕ ಕಳುಹಿಸುತ್ತಾರೆ.

 

ಹಲವು ಫೋನ್‌ಗಳಲ್ಲಿ ವಾಟ್ಸಾಪ್‌ ಬಂದ್‌ ಆಗುತ್ತಿದೆ
ಅತಿ ಶೀಘ್ರದಲ್ಲೇ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಪೂರ್ಣಗೊಳ್ಳಲಿದೆ. ಸ್ಯಾಮ್‌ಸಂಗ್, ಮೊಟೊರೊಲಾ, ಆ್ಯಪಲ್,ಸೋನಿ, ಎಲ್‌ಜಿ ಸೇರಿದಂತೆ ಹಲವು ಮೊಬೈಲ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತಗೊಳ್ಳಲಿದೆ. ವ್ಯಾಟ್ಸಾಪ್ ಹೊಸ ಸುರಕ್ಷತಾ ಫೀಚರ್ಸ್ ಪರಿಚಯ ಮಾಡಿದೆ, ಹೀಗಾಗಿ ಈ ಕಂಪನಿಯ ಹಳೆಯ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುವುದಿಲ್ಲ.

ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಹೀಗಾಗಿ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಆ್ಯಪ್ ವರ್ಕ್ ಆಗಲ್ಲ, ಆ್ಯಂಡ್ರಾಯ್ಡ್ 5.0 ವರ್ಶನ್, ಆ್ಯಪಲ್ ಐಫೋನ್ iOS 12 ಈ ವರ್ಶನ್‌ ಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ.

 

ಯಾವೆಲ್ಲಾ ಫೋನ್‌ಗಳಲ್ಲಿ ವರ್ಕ್ ಆಗಲ್ಲ?
ಗ್ಯಾಲಸ್ಕಿ ಎಸ್3 ಮಿನಿ, ಗ್ಯಾಲಕ್ಸಿ ಎಸ್‌4 ಮಿನಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3, ಮೋಟೋ ಎಕ್ಸ್, ಆ್ಯಪಲ್ ಬ್ರ್ಯಾಂಡ್‌ನ ಐಫೋನ್ 6, ಮೋಟೊರೋಲಾ ಮೋಟೋ ಜಿ, ಐಫೋನ್ ಎಸ್‌ಇ ಹೀಗೆ ಹಳೆಯ ವರ್ಶನ್‌ನ ಹಲವು ಮೊಬೈಲ್‌ಗಳಲ್ಲಿ ವಾಟ್ಸಾಪ್‌ ವರ್ಕ್ ಆಗಲ್ಲ. ಹೀಗಾಗಿ ಈ ವರ್ಶನ್‌ ಫೋನ್ ಇರುವವರು ಹೊಸ ವರ್ಶನ್‌ ಮೊಬೈಲ್‌ ತೆಗೆದುಕೊಳ್ಳಬೇಕು.

 

ಯಾವೆಲ್ಲಾ ಮೊಬೈಲ್‌ಗಳಲ್ಲಿ ವಾಟ್ಸಾಪ್ ಇರಲ್ಲ?

ಸ್ಯಾಮ್‌ಸಂಗ್‌ನ ಈ ಮೊಬೈಲ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ
ಗ್ಯಾಲಕ್ಸಿ ನೋಟ್ 3, ಗ್ಯಾಲಕ್ಸಿ ಎಸ್3 ಮಿನಿ, ಗ್ಯಾಲಕ್ಸಿ ಎಸ್‌4 ಆ್ಯಕ್ಟೀವ್, ಗ್ಯಾಲಕ್ಸಿ ಎಸ್‌4 ಮಿನಿ, ಗ್ಯಾಲಕ್ಸಿ ಎಸ್‌4 ಝೂಮ್ , ಗ್ಯಾಲಸ್ಕಿ ಏಸ್ ಪ್ಲಸ್,ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಕ್ಸ್‌ಪ್ರೆಸ್ 2, ಗ್ಯಾಲಕ್ಸಿ ಗ್ರ್ಯಾಂಡ್ .

 

ಆ್ಯಪಲ್
ಐಫೋನ್5, ಐಫೋನ್ 6, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್, ಐಫೋನ್ ಎಸ್‌ಇ.

ಹುವೈ
ಆ್ಯಸೆಂಡ್ ಪಿ6 ಎಸ್, ಆ್ಯಸೆಂಡ್ ಜಿ525, ಹುವೈ ಸಿ199, ಹುವೈ ಜಿಎಕ್ಸ್1ಎಸ್, ಹುವೈ ವೈ625

 

ಲೆನೊವೊ
ಲೆನೊವೊ 46600, ಲೆನೊವೊ ಎ858ಟಿ, ಲೆನೊವೊ ಪಿ70, ಲೆನೊವೊ ಎಸ್890

Advertisement
Next Article