For the best experience, open
https://m.bcsuddi.com
on your mobile browser.
Advertisement

ಗ್ರಾಮ ಆಡಳಿತಾಧಿಕಾರಿ ಹುದ್ದೆ: ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ.!

08:28 AM Oct 15, 2024 IST | BC Suddi
ಗ್ರಾಮ ಆಡಳಿತಾಧಿಕಾರಿ ಹುದ್ದೆ  ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
Advertisement

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವಂತ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿತ್ತು. ಈ ಹುದ್ದೆಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಇಂದು ಕೆಇಎಯಿಂದ ಇದರ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, VAO-GTTC ಗ್ರಾಮ ಆಡಳಿತ ಅಧಿಕಾರಿ & ಜಿಟಿಟಿಸಿಯ ವಿವಿಧ ಹುದ್ದೆಗಳ‌ ನೇಮಕಾತಿಗೆ ನಡೆಸಿದ್ದ ಕನ್ನಡ ಕಡ್ಡಾಯ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ ಎಂದು ತಿಳಿಸಿದೆ.

Advertisement

ಗ್ರಾಮ ಅಡಳಿತಾಧಿಕಾರಿ ನೇಮಕಾತಿಯ ಕನ್ನಡ ಕಡ್ಡಾಯ ಪರೀಕ್ಷೆ ಬರೆದಿದ್ದಂತ ಅಭ್ಯರ್ಥಿಗಳು,  ತಮ್ಮ ನೋಂದಣಿ ಸಂಖ್ಯೆ ಹಾಗೂ  ಹುಟ್ಟಿದ ದಿನಾಂಕವನ್ನು https://cetonline.karnataka.gov.in/kea/ ವೆಬ್ ಸೈಟ್ ನ‌ಲ್ಲಿ ನಮೂದಿಸಿ, ಫಲಿತಾಂಶ ಪಡೆಯಬಹುದು ಎಂದು ತಿಳಿಸಿದೆ.

Tags :
Author Image

Advertisement