ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

UPSC ಪರೀಕ್ಷೆಯಲ್ಲಿ 71ನೇ ರ್‍ಯಾಂಕ್‌ ಪಡೆದ ಫಾಬಿ ರಶೀದ್ ಅವರ ಯಶೋಗಾಥೆ

09:04 AM Oct 25, 2024 IST | BC Suddi
Advertisement

ಕೇರಳ :ಕೇವಲ 25 ವರ್ಷದಲ್ಲಿ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿಯಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಟಾಪರ್‌ ಆಗಿ ಪಾಸ್‌ ಆದ ಫಾಬಿ ರಶೀದ್ ಅವರ ಸಕ್ಸ್‌ಸ್‌ ಸ್ಟೋರಿ ಇಲ್ಲಿದೆ.

Advertisement

ಫಾಬಿ ರಶೀದ್ ಕೇರಳದ ಅಲಪ್ಪುಳದ ನಿವಾಸಿಯಾಗಿದ್ದು, 1999ರ ಜೂನ್ 23ರಂದು ಜನಿಸಿದ್ದಾರೆ. ಫಾಬಿ ಒಬ್ಬ ಪ್ರತಿಭಾವಂತ ಹುಡುಗಿ. ಅವರು 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಪದವಿ ಪೂರ್ಣಗೊಂಡ ಬಳಿಕ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಫಾಬಿ. ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ಪೋಷಕರಿಬ್ಬರೂ ವೈದ್ಯರು. ಫಾಬಿಯ ತಾಯಿ ಮಕ್ಕಳ ತಜ್ಞೆ, ಇತ್ತೀಚೆಗಷ್ಟೇ ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿದ್ದಾರೆ. ಫಾಬಿಯ ತಂದೆ ಆಯುರ್ವೇದ ತಜ್ಞರಾಗಿದ್ದು, ಅವರೂ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿದ್ದಾರೆ.

ಫಾಬಿ 12ನೇ ವರೆಗೆ ತ್ರಿವೇಂಡ್ರಂನ ಐಸಿಎಸ್ಇ ಬೋರ್ಡ್ಗೆ ಸಂಯೋಜಿತವಾಗಿರುವ ಸರ್ವೋದಯ ಶಾಲೆಯಲ್ಲಿ ಓದಿದ್ದಾರೆ. 10ನೇ ತರಗತಿಯಲ್ಲಿ 96.7% ಮತ್ತು 12ನೇ ತರಗತಿಯಲ್ಲಿ 97.6% ಅಂಕಗಳನ್ನು ಪಡೆದಿದ್ದರು. 12ನೇ ತರಗತಿಯಲ್ಲಿ ರಾಜ್ಯಕ್ಕೆ ಮೂರನೇ ಟಾಪರ್ ಆಗಿದ್ದರು. ಇದರ ನಂತರ ಅವರು ಭಾರತೀಯ ವಿಜ್ಞಾನ ಶಿಕ್ಷಣ ಸಂಶೋಧನಾ ಸಂಸ್ಥೆಯಿಂದ ಜೈವಿಕ ವಿಜ್ಞಾನಗಳ ಸಮಗ್ರ ಕೋರ್ಸ್ನಲ್ಲಿ ಬಿಎಸ್ ಎಂಎಸ್ ಮಾಡಿದರು.

2017 ರಿಂದ 2022 ರವರೆಗೆ IISER ನಲ್ಲಿ ಓದುತ್ತಿರುವಾಗ, ಫಾಬಿ ರಶೀದ್ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ INSPIRE ಫೆಲೋಶಿಪ್ ಪಡೆದರು. ಫಾಬಿ ರಶೀದ್ 2022 ರಲ್ಲಿ ಪದವಿ ಪೂರ್ಣಗೊಳಿಸಿದ ತಕ್ಷಣ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.ಫಾಬಿ ರಶೀದ್ UPSC CSE 2023 ರಲ್ಲಿ 71 ನೇ ರ್ಯಾಂಕ್ ಗಳಿಸಿದ್ದರು.

 

Advertisement
Next Article