ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

SSLC ಪಾಸಾದವರಿಗೆ ಗುಡ್ ನ್ಯೂಸ್ : BESCOMನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ

11:40 AM Oct 17, 2024 IST | BC Suddi
Advertisement

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯು ಕಿರಿಯ ಸ್ಟೇಶನ್ ಅಟೆಂಡೆಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅದರಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನಲ್ಲಿ ಹಲವು ಹುದ್ದೆಗಳ ನೇಮಕಾತಿ ನಡೆಯಲಿದೆ. ಬೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ 618 ಮತ್ತು ಬ್ಯಾಕ್‌ಲಾಗ್ ಹುದ್ದೆಗಳು 288 ಭರ್ತಿ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಲಾಗಿದೆ.

Advertisement

ಹುದ್ದೆಗಳ ವಿವರ :

ಪರಿಶಿಷ್ಟ ಜಾತಿ – 105
ಪರಿಶಿಷ್ಟ ವರ್ಗ – 44
ಸಾಮಾನ್ಯ – 272
ಪ್ರವರ್ಗ – 125
ಪ್ರವರ್ಗ 2ಎ – 92
ಪ್ರವರ್ಗ 2ಬಿ – 25
ಪ್ರವರ್ಗ 3ಎ – 25
ಪ್ರವರ್ಗ 3ಬಿ – 30

288 ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 50, ಪರಿಶಿಷ್ಟ ವರ್ಗ 10, ಸಾಮಾನ್ಯ 121, ಪ್ರವರ್ಗ-1 13, ಪ್ರವರ್ಗ-2ಎ 56, ಪ್ರವರ್ಗ 2-ಬಿ 9, ಪ್ರವರ್ಗ-3ಎ 13, ಪ್ರವರ್ಗ-3ಬಿ 16 ಹುದ್ದೆಗಳಿವೆ.

ವಿದ್ಯಾರ್ಹತೆ :

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗಳು ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (CBSE/ ICSE) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರಬೇಕು.

ವೇತನ ಶ್ರೇಣಿ :

1ನೇ ವರ್ಷ – ರೂ. 17,000/-
2ನೇ ವರ್ಷ – ರೂ. 19,000/-
3ನೇ ವರ್ಷ – ರೂ. 21,000/-

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಅಕ್ಟೋಬರ್ 21
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 20

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://bescom.karnataka.gov.in

Advertisement
Next Article