ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

RCBvsRR : RCB ಈ ಸಲ ಕಪ್‌ ಗೆಲ್ಲುತ್ತೆ : ವಿಜಯ ಮಲ್ಯ ವಿಶ್ವಾಸ

06:00 PM May 22, 2024 IST | Bcsuddi
Advertisement

RCBಯ ಮಾಜಿ ಮಾಲೀಕ ವಿಜಯ ಮಲ್ಯ ತಂಡಕ್ಕೆ ಶುಭ ಹಾರೈಸಿದ್ದಾರೆ. RCB ಈ ಸಲ ಕಪ್ನಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ x ನಲ್ಲಿ ಪ್ರತಿಕ್ರಿಸಿರುವ ಮಲ್ಯ, 'ನಾನು ಆರ್‌ಸಿಬಿ ಫ್ರಾಂಚೈಸ್‌ಗಾಗಿ ಮತ್ತು ವಿರಾಟ್‌ ಕೊಹ್ಲಿಗಾಗಿ ಬಿಡ್‌ ಮಾಡಿದಾಗ ಇದಕ್ಕಿಂತ ಉತ್ತಮ ಆಯ್ಕೆ ಸಾಧ್ಯವಿಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು. RCBಗೆ ಕಪ್ ಗೆಲ್ಲುವ ಅತ್ಯುತ್ತಮ ಅವಕಾಶವಿದೆ ಎಂದು ಈಗ ನನ್ನ ಒಳಮನಸ್ಸು ನುಡಿಯುತ್ತಿದೆ.

Advertisement

ಮುನ್ನುಗ್ಗಿ ಒಳ್ಳೆಯದಾಗಲಿ ಎಂದಿದ್ದಾರೆ. ಇಂದು ಎಲಿಮಿನೇಟ್​ ಪಂದ್ಯಕ್ಕಾಗಿ ಫ್ಯಾನ್ಸ್​ ಮಾತ್ರವಲ್ಲ, ಆರ್​ಸಿಬಿ ತಂಡದ ಮಾಜಿ ಒಡೆಯ ವಿಜಯ ಮಲ್ಯ ಕೂಡ ಕಾಯುತ್ತಿದ್ದಾರೆ. ಇಂದಿನ ಪಂದ್ಯಕ್ಕಾಗಿ ಕಾಯುತ್ತಾ ಚಡಪಡಿಕೆಯನ್ನು ತೋರ್ಪಡಿಸಿದ್ದಾರೆ. ಜೊತೆಗೆ ತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯ ಭಾರತದಿಂದ ಕಾಲ್ಕಿತ್ತಿರುವ ಮದ್ಯದ ದೊರೆ ವಿಜಯ್​ ಮಲ್ಯ ಲಂಡನ್​ನಲ್ಲಿ ಬೀಡುಬಿಟ್ಟಿದ್ದಾರೆ. ಆದರೂ ತಾನು ಹುಟ್ಟು ಹಾಕಿದ ತಂಡವನ್ನು ಮಲ್ಯ ಮರೆಯಲಿಲ್ಲ ಎಂಬುದಕ್ಕೆ ಅವರ ಈ ಟ್ವೀಟ್​ ಸಾಕ್ಷಿ.

Advertisement
Next Article