ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

PUC ಪಾಸ್ ಆದವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್..! ಕೇಂದ್ರ ಸರ್ಕಾರದ ಸ್ಕಾಲರ್ಶಿಪ್

02:45 PM Aug 06, 2024 IST | BC Suddi
Advertisement

ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ಪಿಎಮ್ ಉಷಾ ವಿದ್ಯಾರ್ಥಿವೇತನ (Education scholarship) ಯೋಜನೆಯನ್ನು ಜಾರಿಗೆ ತಂದಿದ್ದು, ಪಿಯುಸಿ ಪಾಸ್ ಆಗುರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು.

Advertisement

ಹೌದು, ಪಿಎಮ್ ಉಷಾ ಸ್ಕಾಲರ್ಶಿಪ್ ಯೋಜನೆಯ ಮೂಲಕ ಪಿಯುಸಿ ಪಾಸ್ ಆಗಿದ್ದು, ಡಿಗ್ರಿ ಓದಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ 3 ವರ್ಷ ಡಿಗ್ರಿ ಮಾಡುವುದಕ್ಕಾಗಿ, ಕೇಂದ್ರ ಸರ್ಕಾರದ ಕಡೆಯಿಂದ ಈ ಒಂದು ಸ್ಕಾಲರ್ಶಿಪ್ ಕೊಡಲಾಗುತ್ತಿದೆ.

20 ಸಾವಿರದವರೆಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಸಿಗಲಿದ್ದು, ಇದಕ್ಕೆ ಅರ್ಹತೆಯ ಮಾನದಂಡಗಳು ಏನೇನು? ಯಾರೆಲ್ಲಾ ಪಿಎಮ್ ಉಷಾ ಯೋಜನೆಗೆ ಅರ್ಜಿ ಸಲ್ಲಿಸಬಹುದು? 

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು: ಪಿಎಮ್ ಉಷಾ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ವಿದ್ಯಾರ್ಥಿ 2024ನೇ ಸಾಲಿನಲ್ಲಿ ಪಿಯುಸಿ ಪಾಸ್ ಆಗಿದ್ದು, 80% ಗಿಂತ ಜಾಸ್ತಿ ಮಾರ್ಕ್ಸ್ ಪಡೆದಿರಬೇಕು. 3 ವರ್ಷದ ಡಿಗ್ರಿ ಕೋರ್ಸ್ ಮಾಡುವವರು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ, ಇದರ ಸೌಲಭ್ಯ ಪಡೆದುಕೊಳ್ಳಬಹುದು.. ಸಿಗುವ ಸ್ಕಾಲರ್ಶಿಪ್ ಎಷ್ಟು? ಪಿಎಮ್ ಉಷಾ ಯೋಜನೆಗೆ ಅರ್ಜಿ ಸಲ್ಲಿಸಿ, ಸ್ಕಾಲರ್ಶಿಪ್ ಗೆ ಯಾರೆಲ್ಲಾ ಆಯ್ಕೆ ಆಗುತ್ತಾರೋ ಅಂಥವರಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಎಂದು ನೋಡುವುದಾದರೆ..

*ಡಿಗ್ರಿ ಮೊದಲ ವರ್ಷದ ಅಡ್ಮಿಷನ್ ಗಾಗಿ ₹12 ಸಾವಿರ ಸ್ಕಾಲರ್ಶಿಪ್ ಸಿಗುತ್ತದೆ. *2 ಹಾಗೂ 3ನೇ ವರ್ಷದ ಅಡ್ಮಿಷನ್ ಗಾಗಿ ₹20 ಸಾವಿರ ಸ್ಕಾಲರ್ಶಿಪ್ ಸಿಗುತ್ತದೆ. ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ರಿಟರ್ನ್ಸ್ ಬರುತ್ತೆ? ಒಟ್ಟಾರೆ ಸಿಗೋ ಬಡ್ಡಿ ಎಷ್ಟು ಗೊತ್ತಾ?

ಬೇಕಾಗುವ ದಾಖಲೆಗಳು: *ವಿದ್ಯಾರ್ಥಿಯ ಆಧಾರ್ ಕಾರ್ಡ್ *ಫೋನ್ ನಂಬರ್ *ಆಧಾರ್ ಕಾರ್ಡ್ *10 ಹಾಗೂ 12ನೇ ತರಗತಿಯಲ್ಲಿ ಪಾಸ್ ಆಗಿರುವ ಮಾರ್ಕ್ಸ್ ಕಾರ್ಡ್ *ಡಿಗ್ರಿಗೆ ಅಡ್ಮಿಷನ್ ಆಗಿರುವ ದಾಖಲೆಗಳು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅರ್ಜಿ ಸಲ್ಲಿಕೆಗೆ 2024ರ ಅಕ್ಟೊಬರ್ ಕೊನೆಯ ದಿನಾಂಕ ಆಗಿದ್ದು, ಕ್ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಆಗಿರುತ್ತದೆ, https://scholarships.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 080-23311330 ಈ ನಂಬರ್ ಗೆ ಅರ್ಜಿ ಕರೆ ಮಾಡಬಹುದು.

Advertisement
Next Article