ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರು ಮಾತ್ರ ಅತಿಥಿ ಉಪನ್ಯಾಸಕರಾಗಿ  ನೇಮಕ.!

08:15 AM Sep 26, 2024 IST | BC Suddi
Advertisement

 

Advertisement

ಬೆಂಗಳೂರು: ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರನ್ನು ಮಾತ್ರ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಾಗಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಇದರಿಂದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಕರೆದು ಕೌನ್ಸೆಲಿಂಗ್ ನಿಗದಿ ಮಾಡಿದ ಉನ್ನತ ಶಿಕ್ಷಣ ಇಲಾಖೆ ಮತ್ತೆ ಅರ್ಜಿ ಕರೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಯುಜಿಸಿ ನಿಯಮಗಳ ಅನುಸಾರ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಲು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ(K-SET), ರಾಜ್ಯ ಅರ್ಹತಾ ಪರೀಕ್ಷೆ(SET), ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET), ಪಿ.ಹೆಚ್.ಡಿ. ಪದವಿ ಕಡ್ಡಾಯವಾಗಿತ್ತು. ಆದರೆ, ಶಿಕ್ಷಣ ಇಲಾಖೆ ಆಗಸ್ಟ್ 24ರಂದು ಹೊರಡಿಸಿದ ಅಧಿಸೂಚನೆ ಅನುಸಾರ ಸ್ನಾತಕೋತ್ತರ ಪದವಿಯನ್ನು ಹೊಂದಿದವರು ಅತಿಥಿ ಉಪನ್ಯಾಸಕರಾಗಲು ಅರ್ಜಿ ಸಲ್ಲಿಸಬಹುದಿತ್ತು. ಕೆಲವು ಅಭ್ಯರ್ಥಿಗಳು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ಯುಜಿಸಿ ಅನುಸಾರ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರದ ಯಾವುದೇ ಅಭ್ಯರ್ಥಿಯನ್ನು ಇಲಾಖೆಗಳು ಆಯ್ಕೆ ಮಾಡದಂತೆ ಆದೇಶ ನೀಡಿದೆ.

ಸ್ನಾತಕೋತ್ತರ ಪದವಿ ಪಡೆದವರು ಅತಿಥಿ ಉಪನ್ಯಾಸಕರಾಗಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿ ಕೌನ್ಸೆಲಿಂಗ್ ಗೆ ದಿನ ನಿಗದಿ ಮಾಡಿದೆ. ಸೆ. 30ರೊಳಗೆ ಅತಿಥಿ ಉಪನ್ಯಾಸಕರು ಕಾಲೇಜು ಪ್ರವೇಶಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಹೈಕೋರ್ಟ್ ಆದೇಶದಿಂದ ಇವೆಲ್ಲ ಪ್ರಕ್ರಿಯೆಗೆ ತಡೆ ಬಿದ್ದಂತಾಗಿದೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,600 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಶೇಕಡ 55 ರಷ್ಟು ಮಂದಿ ಯುಜಿಸಿ ನಿಯಮಗಳ ಪ್ರಕಾರ ನಿಗದಿಪಡಿಸಿದ ಅರ್ಹತೆ ಹೊಂದಿಲ್ಲವೆನ್ನಲಾಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಅತಿಥಿ ಉಪನ್ಯಾಸಕರು ಕೂಡ ಹೊಂದಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಹಿಂದೆ ಮಾನದಂಡ ನಿಗದಿ ಮಾಡಿತ್ತು.

 

Tags :
ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರು ಮಾತ್ರ ಅತಿಥಿ ಉಪನ್ಯಾಸಕರಾಗಿ  ನೇಮಕ.!
Advertisement
Next Article