ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

NLM ಯೋಜನೆಯಡಿ ರೂ 25 ಲಕ್ಷದವರೆಗೆ ಶೇ 50% ಸಬ್ಸಿಡಿಯಲ್ಲಿ ಸ್ವ-ಉದ್ಯೋಗ ಮಾಡಲು ಅವಕಾಶ

04:24 PM Jul 20, 2024 IST | Bcsuddi
Advertisement

ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಅವರ ಉದ್ದಿಮೆಗಳನ್ನು ಲಾಭದಾಯಕವನ್ನಾಗಿ ಪರಿವರ್ತಿಸಿಬೇಕೆನ್ನುವ ಮೂಲ ಉದ್ದೇಶದೊಂದಿಗೆ ಜಾನುವಾರು ಉತ್ಪನ್ನ (ಹಾಲು, ಮಾಂಸ, ಮೊಟ್ಟೆ, ಉಣ್ಣೆಗಳ ಉತ್ಪಾದನೆ ಹೆಚ್ಚಿಸುವುದು, ಅಲ್ಲದೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸುವುದು,

Advertisement

ಈ ಮೂಲಕ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಸದ್ದುದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಲು ಸಾಲ ಮತ್ತು ಸಹಾಯಧನ ಪಡೆಯಬವುದು:

ಈ ಕಾರ್ಯಕ್ರಮದಡಿ ಗಾಮೀಣ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

ಸಹಾಯಧನ ವಿವರ ಹೀಗಿದೆ:

1.  ಗ್ರಾಮೀಣ ಕೋಳಿ ಉದ್ದಿಮ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ ಹ್ಯಾಚರಿ ಘಟಕ ಮರಿಗಳ ಸಾಕಾಣಿಕೆ ಘಟಕ) Rural Poultry Entrepreneurship Programme-ವೆಚ್ಚ ರೂ.3472,540/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ರೂ.25, ಲಕ್ಷ.

2. ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500 25) Entrepreneur in small ruminant sector (Sheep and goat farming) ಘಟಕ ವೆಚ್ಚ ರೂ. 87,30,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಗರಿಷ್ಟ ರೂ.50 ಲಕ್ಷ

3. ಹಂದಿ ತಳಿ ಸಂವರ್ಧನಾ ಘಟಕ (100 10) Piggery entrepreneurship ಘಟಕ ವೆಚ್ಚ ರೂ. 50,29,400/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಗರಿಷ್ಟ ರೂ.30 ಲಕ್ಷ.

4. ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000-2500 ಮೆ.ಟನ್‌ ಉತ್ಪಾದನೆ) Sllage making unit for entrepreneurs (Production capacity 2000-2500 MT Per Annum). 500,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ಗರಿಷ್ಠ-ರೂ.50 ಲಕ್ಷ.

ಕಡಿಮೆ ಪ್ರಮಾಣದಲ್ಲಿ ಈ ಮೇಲಿನ ಉದ್ದಿಮೆಯನ್ನು  ಪ್ರಾರಂಭಿಸಲು ಸಹ ಅವಕಾಶವಿರುತ್ತದೆ ಒಮ್ಮೆ ನಿಮ್ಮ ತಾಲ್ಲೂಕಿನ ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆಯಬವುದು.

ಈ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳು:

1. ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ/ ಪಾನ್ ಕಾರ್ಡ್.

2. ಸ್ವಂತ ಜಮೀನಿನ ಪಹಣಿ ಅಥವಾ ಲೀಜ್ ಪಡೆದ ಜಮೀನಿನ ಪಹಣಿ,(RTC or Lease Land Agreement )

3. ತರಬೇತಿ ಪ್ರಮಾಣ ಪತ್ರ(Trainig Certificate)

4. ಯೋಜನಾ ವರದಿ (DPR).

5. ಜಿ.ಪಿ. ಎಸ್ ಪೋಟೋ (Site Jio tag Photo.)

ಇದನ್ನೂ ಓದಿ: Karnataka post office jobs-2024: ಕರ್ನಾಟಕ ಅಂಚೆ ಇಲಾಖೆಯಲ್ಲಿ 1900 ಹುದ್ದೆಗಳ ಬೃಹತ್ ನೇಮಕಾತಿ!

6. ಆರು ತಿಂಗಳ ಬ್ಯಾಂಕ್‌ ವಹಿವಾಟು ವರದಿ(6 months Bank Statement. )

7. ಅನುಭವದ ಪ್ರಮಾಣ ಪತ್ರ(Experience Certificate. )

8. ರದ್ದುಗೊಳಿಸಿದ ಬ್ಯಾಂಕ್ ಚೆಕ್(Cancelled Chek leaf.)

9. ಬ್ಯಾಂಕಿನಲ್ಲಿ ನಿಮ್ಮ ಖಾತೆ ಇರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಪತ್ರ(Bank Moudtae form (available in Bank)

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಜಾಲತಾಣ ಭೇಟಿ ಮಾಡಿ: https://nlm.udyamimitra.in/ ಮತ್ತು https://ahf.karnataka.gov.in/

ಸಹಾಯವಾಣಿ ಸಂಖ್ಯೆ: 8277100200

Advertisement
Next Article