For the best experience, open
https://m.bcsuddi.com
on your mobile browser.
Advertisement

Breaking: ಇನ್ಮುಂದೆ ಮುಸ್ಲಿಂ ವಿವಾಹ ನೋಂದಣಿಯನ್ನು ಖಾಜಿ, ಮೌಲ್ವಿಗಳು ಮಾಡುವಂತಿಲ್ಲ.!

12:42 PM Aug 22, 2024 IST | BC Suddi
breaking  ಇನ್ಮುಂದೆ ಮುಸ್ಲಿಂ ವಿವಾಹ ನೋಂದಣಿಯನ್ನು ಖಾಜಿ  ಮೌಲ್ವಿಗಳು ಮಾಡುವಂತಿಲ್ಲ
Advertisement

ದಿಸ್ಪುರ್: ಅಸ್ಸಾಂ ಕ್ಯಾಬಿನೆಟ್ ಮುಸ್ಲಿಂ ವಿವಾಹ ನೋಂದಣಿ ಮಸೂದೆ, 2024 ಅನ್ನು ಅನುಮೋದಿಸಿದೆ. ಇದು ಖಾಜಿ ಅಥವಾ ಮೌಲ್ವಿಗಳು ಮುಸ್ಲಿಂ ವಿವಾಹಗಳನ್ನು ನೋಂದಾಯಿಸುವುದನ್ನು ತಡೆಯಲಿದ್ದು, ಈ ಕಾರ್ಯವನ್ನು ಉಪ-ರಿಜಿಸ್ಟ್ರಾರ್ ನಿರ್ವಹಿಸಲಿದ್ದಾರೆ.

ಈ ಮೂಲಕ ಬಾಲ್ಯ ವಿವಾಹವನ್ನು ತಡೆಯಲು ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಮಹತ್ವದ ಹೆಜ್ಜೆಯನ್ನು ಒಟ್ಟಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, '18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡ ಯಾವುದೇ ಮದುವೆಯನ್ನು ನೋಂದಾಯಿಸಲಾಗುವುದಿಲ್ಲ ಎಂದು ನಾವು ಮಸೂದೆಯನ್ನು ಪರಿಚಯಿಸಿದ್ದೇವೆ.

ಅಲ್ಲದೇ, ನೋಂದಣಿಯ ಅಧಿಕಾರವನ್ನು ಖಾಜಿಯಿಂದ ಸಬ್ ರಿಜಿಸ್ಟ್ರಾರ್ ಗೆ ವರ್ಗಾಯಿಸಲಾಗುವುದು” ಎಂದು ತಿಳಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯತ್ತ ಒಂದು ಹೆಜ್ಜೆ ಎಂದು ಪರಿಗಣಿಸಲಾದ ಮಸೂದೆಯು ಶುಕ್ರವಾರ ಮಂಡನೆಯಾಗಲಿದೆ. ಮುಸ್ಲಿಂ ವಿವಾಹ ಮತ್ತು ವಿಚ್ಛೇದನದ ಕಾರ್ಯವಿಧಾನಗಳನ್ನು ಖಾಝಿಗಳು ಅಥವಾ ಮೌಲ್ವಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಈ ವರ್ಷದ ಆರಂಭದಲ್ಲಿ ಸರ್ಕಾರವು 1935ರ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ರದ್ದುಗೊಳಿಸಿತ್ತು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement