ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

KSRTC ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್.! ಇಂದು ರಾಜ್ಯದ್ಯಂತ ಎಲ್ಲಡೆ ಜಾರಿ

01:35 PM Nov 05, 2024 IST | BC Suddi
Advertisement

ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಯಿಸಿದ ನಂತರ ಪಂಚ ಗ್ಯಾರಂಟಿ ಯೋಜನೆಗಳು (5 ಗ್ಯಾರಂಟಿ ಯೋಜನೆಗಳನ್ನು) ಜಾರಿಗೆ ತರಲಾಯಿತು. ಇದರಲ್ಲಿ ಒಂದಾದ ಶಕ್ತಿ ಯೋಜನೆಯಾಗಿದೆ, ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲ ಮಹಿಳೆಯರು ತಮ್ಮ ಆರ್ಥಿಕ ಕೆಲಸಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ ಇದರಿಂದಾಗಿ ಮಹಿಳೆಯರಿಗೆ ಸಾಕಷ್ಟು ಸಹಾಯವಾಗಿದೆ.

Advertisement

ಶಕ್ತಿ ಯೋಜನೆಯನ್ನು ಜಾರಿಗೆ ತಂದಾಗಲಿಂದ ಸಾಕಷ್ಟು ರಾಜ್ಯದ ಸಾರಿಗೆ ಸಂಚಾರ ಇಲಾಖೆ ಮೇಲೆ ನಷ್ಟ ಉಂಟಾಗುತ್ತಿದೆ ಮತ್ತು ಬಸ್ಸುಗಳಲ್ಲಿ ಸಾಕಷ್ಟು ರಶ್ ಆಗುತ್ತಿದೆ ಹಾಗೂ ಟಿಕೆಟ್ ಕಳ್ಳಾಟ ಕೂಡ ನಡೆಯುತ್ತಿದೆ. ಎಂದು ರಸ್ತೆ ಸಾರಿಗೆ ಸಂಚಾರ ಇಲಾಖೆ ಹೇಳಿದೆ ಇದನ್ನು ತಡೆಯಲು ರಸ್ತೆ ಸಾರಿಗೆ ಸಂಚಾರ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದ್ದಾರೆ, ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ. ಬಸ್ಗಳಲ್ಲಿ ಪ್ರಯಾಣಿಸುವ ಗಂಡಸರಿಗೆ ಮಹಿಳೆಯರ ಟಿಕೆಟ್ ನೀಡಿ ಹಣ ಪಡೆಯುವ ಮಾಹಿತಿ ಇಲಾಖೆಯ ಗಮನಕ್ಕೆ ಬಂದಿದ್ದು, ಇಂಥ ಎಲ್ಲಾ ಕ್ರಮಗಳನ್ನು ಸ್ಥಗಿತಗೊಳಿಸುವ ಸಲುವಾಗಿ ರಾಜ್ಯದ ರಸ್ತೆ ಸಾರಿಗೆ ಸಂಚಾರ ಇಲಾಖೆ ಹೊಸ ರೂಲ್ಸ್ ಅನ್ನು ಕೈಗೊಂಡಿದೆ.

ಇನ್ನು ಮೇಲೆ ಸ್ಮಾರ್ಟ್ ಕಾರ್ಡ್ ಬಿಡುಗಡೆ:

ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಗಂಡಸರಿಗೆ ಟಿಕೆಟ್ ನೀಡಿ ಹಣ ಪಡೆಯುವ ಕೆಲಸದಿಂದಾಗಿ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ 100 ಕೋಟಿ ನಷ್ಟ ಉಂಟಾಗಿದೆ ಎಂದು ಇಲಾಖೆ ಹೇಳಿದೆ. ಇನ್ನು ಮುಂದೆ ಟಿಕೆಟ್ ಕಳ್ಳ ಸಾಗಾಣಿಕೆ ತಡೆಯಲು ರಸ್ತೆ ಸಾರಿಗೆ ಸಂಚಾರವು ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ತೋರಿಸಿ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಬೇಕಾಗಿದೆ. ಈ ಒಂದು ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು 16 ರಿಂದ 17 ರೂಪಾಯಿಯನ್ನು ಕಟ್ಟಬೇಕಾಗುತ್ತದೆ ಇನ್ನು ಈ ಒಂದು ರೂಲ್ಸ್, ಶೀಘ್ರದಲ್ಲೇ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಪಯೋಗವಾಗಲಿದೆ ಎಂದು ರಸ್ತೆ ಸಾರಿಗೆ ಸಂಚಾರ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿಯವರು ಹೇಳಿಕೆ ನೀಡಿದ್ದಾರೆ.

Advertisement
Next Article