ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

KPSC ಯಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಹುದ್ದೆಗಳಿ ಭರ್ತಿಗೆ ಅರ್ಜಿ ಆಹ್ವಾನ.!

05:00 PM Jul 31, 2024 IST | BC Suddi
Advertisement

 

Advertisement

ಬೆಂಗಳೂರು: ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಪ್ರಕ್ರಿಯೆ ಆರಂಭಿಸಿದೆ.

ಮೂಲ ವೃಂದದ 342 ಹುದ್ದೆಗಳು ಹಾಗೂ ಬ್ಯಾಕ್‌ಲಾಗ್‌ನ 48 ಹುದ್ದೆಗಳು ಸೇರಿ ಒಟ್ಟು 400 ಹುದ್ದೆಗಳಿವೆ. ಈ ಹುದ್ದೆಗಳು ಗ್ರೂಪ್ ಎ ಹುದ್ದೆಗಳಾಗಿರುತ್ತವೆ.

ಆಗಸ್ಟ್ 12ರಂದು ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಸೆಪ್ಟೆಂಬರ್ 12ಕ್ಕೆ ಅಂತ್ಯವಾಗಲಿದೆ.

ಅಂಗೀಕೃತ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ಪದವಿ ಪಡೆದು (B.V.Sc/B.V.Sc&AH) ಕರ್ನಾಟಕ ವೆಟೆರಿನರಿ ಕೌನ್ಸಿಲ್‌ನಲ್ಲಿ ನೋಂದಾಯಿಸಲ್ಪಟ್ಟ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ.

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹600. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹300. ಮಾಜಿ ಸೈನಿಕರಿಗೆ ₹50, ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಗರಿಷ್ಠ 35. ಮೀಸಲು ವರ್ಗಗಳಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಕನ್ನಡ ಕಡ್ಡಾಯ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ https://kpsc.kar.nic.in/ ಗೆ ಭೇಟಿ ನೀಡಿ.

Tags :
KPSC ಯಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಹುದ್ದೆಗಳಿ ಭರ್ತಿಗೆ ಅರ್ಜಿ ಆಹ್ವಾನ.!
Advertisement
Next Article