ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

HSRP ನಂಬರ್‌ ಪ್ಲೇಟ್‌ ಅಳವಡಿಕೆ ಡೆಡ್‌ಲೈನ್‌ ಇಂದಿಗೆ ಮುಕ್ತಾಯ…! ಮುಂದೆನು..?

03:20 PM Sep 15, 2024 IST | BC Suddi
Advertisement

HSRP Number Plate: 2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡುವಂತೆ ಸಾರಿಗೆ ಇಲಾಖೆ ಕಡ್ಡಾಯಗೊಳಿಸುವಂತೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ಇಲ್ಲಿವರೆಗೂ ನಾಲ್ಕು ಬಾರಿ ಗಡು ನೀಡಿತ್ತು. ಇದೀಗ ಸೆಪ್ಟೆಂಬರ್‌ 15, 2024ರ ದಂಡಾಸ್ತ್ರವನ್ನು 18ಕ್ಕೆ ವಿಸ್ತರಣೆ ಮಾಡಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.

Advertisement

ಕರ್ನಾಟಕ ಸಾರಿಗೆ ಇಲಾಖೆಯು ಸೆಪ್ಟೆಂಬರ್ 16ಕ್ಕೆ ಗಡುವು ನೀಡಿತ್ತು. ಇನ್ನು ಇಂದು (ಆಗಸ್ಟ್‌ 15) ನೋಂದಣಿ ಮಾಡಿಸಿಕೊಂಡವರಿಗೆ ಮುಂದೆ ದಂಡ ಬೀಳುವುದಿಲ್ಲ. ಇನ್ಮುಂದೆ ವಿಸ್ತರಣೆಯಿಲ್ಲ. ಸೋಮವಾರದಿಂದ ದಂಡ ವಿಧಿಸಿವುದಾಗಿ ಈಗಾಗಲೇ ಕರ್ನಾಟಕ ಸಾರಿಗೆ ಇಲಾಖೆ ಘೋಷಣೆ ಮಾಡಿತ್ತು.

ರಾಜ್ಯದ ಪೊಲೀಸ್‌ ಇಲಾಖೆ ಸಂಚಾರ ವಿಭಾಗ, ಸಾರಿಗೆ ಇಲಾಖೆಯವರೂ ಹಳೆ ನಂಬರ್‌ ಪ್ಲೇಟ್‌ ಇದ್ದ ವಾಹನ ಮಾಲೀಕರಿಗೆ ದಂಡ ವಿಧಿಸಲು ಆರಂಭಿಸಲಿದ್ದಾರೆ. ಆದರೆ ಮೂರು ದಿನದವರೆಗೆ ಕೊಂಚ ರಿಲ್ಆಕ್ಸ್‌ ಇರಲಿದೆ. ಇನ್ನು ನಂಬರ್‌ ಪ್ಲೇಟ್‌ ಅಳವಡಿಕೆ ಕುರಿತ ಅರ್ಜಿ ವಿಚಾರಣೆ ಸದ್ಯ ಹೈಕೋರ್ಟ್‌ನಲ್ಲಿದ್ದು, ಆದೇಶ ಬರುವವರೆಗೂ ಬಲವಂತದ ದಂಡ ವಿಧಿಸುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.ಈಗಾಗಲೇ ಕರ್ನಾಟದಲ್ಲಿ ಎಲ್ಲಾ ರೀತಿಯ ವಾಹನಗಳಿಗೆ ನಂಬರ್‌ಪ್ಲೇಟ್‌ ಅಳವಡಿಸಿಕೊಳ್ಳಲು ಮೂರು ಬಾರಿ ಗಡುವು ವಿಸ್ತರಣೇ ಮಾಡಲಾಗಿದೆ. ಈ ಬಾರಿಯೂ ಭಾನುವಾರದವರೆಗೂ ನೋಂದಣಿಗೆ ಅವಕಾಶವಿದೆ. ನಿಯಮದ ಪ್ರಕಾರ, ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ಸೆಪ್ಟೆಂಬರ್ 16ರಿಂದ 500 ರೂಪಾಯಿ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಸಾರಿಗೆ ಇಲಾಖೆ ಈಗಾಗಲೇ ಹೇಳಿಕೆ ನೀಡಿತ್ತು. ಆದರೆ ಸೆಪ್ಟೆಂಬರ್ 18ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಆದ್ದರಿಂದ ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್‌ ತಿಳಿಸಿದ್ದಾರೆ.

ಬುಧವಾರದ ಕೋರ್ಟ್‌ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನವನ್ನು ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಪ್ರಕಟಿಸಲಿದೆ. ಇದರಿಂದ ಮೂರು ದಿನ ದಂಡ ಪ್ರಯೋಗದಿಂದ ವಿನಾಯಿತಿ ಸಿಕ್ಕಂತಾಗಲಿದೆ. ಸಾರಿಗೆ ಇಲಾಖೆಯು 2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್‌ನಲ್ಲಿ ಹೊರಡಿಸಿತ್ತು.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 

Advertisement
Next Article