ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ಬಂಪರ್ ಲಾಭ ಫಿಕ್ಸ್, ಇದರ ಹಾಲು ಮಾಂಸಕ್ಕೆ ಭಾರೀ ಬೇಡಿಕೆ..!

05:24 PM Jul 26, 2024 IST | Bcsuddi
Advertisement

ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಮನಸ್ಸು ಮಾಡಿದರೆ, ಅದಕ್ಕಾಗಿ ನಿಮಗೆ ಹಲವು ಆಯ್ಕೆಗಳಿವೆ. ಕಡಿಮೆ ಹೂಡಿಕೆಯಿಂದ ಶುರು ಮಾಡುವ ಮೂಲಕ ಬ್ಯುಸಿನೆಸ್ ಮಾಡಬಹುದು. ಸಿಟಿಯಲ್ಲಿ ಮಾತ್ರವಲ್ಲ ಹಳ್ಳಿಯಲ್ಲೇ ಇದ್ದುಕೊಂಡು, ಅಲ್ಲಿಗೆ ಸರಿ ಹೊಂದುವಂಥ ಸ್ವಂತ ಉದ್ಯಮವನ್ನೇ ಶುರು ಮಾಡಬಹುದು. ಇದಕ್ಕೆ ಒಂದು ಒಳ್ಳೆಯ ಬ್ಯುಸಿನೆಸ್ ಆಯ್ಕೆ, ಮೇಕೆ ಸಾಕಾಣಿಕೆ (Goat Farming) ಆಗಿದೆ. ಇದನ್ನು ನೀವು ಹಳ್ಳಿಯಲ್ಲೇ ಶುರು ಮಾಡಬಹುದು. ಮೇಕೆ ಸಾಕಾಣಿಕೆಗೆ ಈಗ ಭಾರಿ ಬೇಡಿಕೆ ಇದೆ.

Advertisement

ಹೌದು, ಮೇಕೆ ಸಾಕಾಣಿಕೆ ಏನೋ ಮಾಡಬಹುದು, ಆದರೆ ಒಳ್ಳೆಯ ಆದಾಯ ಬರುವಂಥ ಮೇಕೆಯ ತಳಿಯನ್ನು ಸಾಕಾಣಿಕೆ ಮಾಡಬೇಕು. ಮೇಕೆಗಳ ವಿಷಯಕ್ಕೆ ಬಂದರೆ, ಹಸುವಿನ ಹಾಲಿಗೆ ಇರುವಷ್ಟೇ ಬೇಡಿಕೆ ಮೇಕೆ ಹಾಲಿಗೂ ಇದೆ.

ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಇದ್ದೋರಿಗೆ ಬಿಗ್ ಅಪ್ಡೇಟ್! ಈ ತಪ್ಪು ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ ಅದೇ ರೀತಿ ಮೇಕೆಯ ಮಾಂಸಕ್ಕೆ ಕೂಡ ಅಷ್ಟೇ ಬೇಡಿಕೆ ಇದೆ. ಹಾಗಾಗಿ ಒಳ್ಳೆಯ ತಳಿಯ ಮೇಕೆ ಸಾಕಾಣಿಕೆ ಮಾಡಿದರೆ, ಅದರಿಂದ ಒಳ್ಳೆಯ ಲಾಭ ಗಳಿಸಬಹುದು. ಅಂಥ ತಳಿಯ ಮೇಕೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಬೀಟಲ್ ತಳಿಯ ಸಾಕಾಣಿಕೆ ಮಾಡಿ: Beetal Goat Farming ಉತ್ತಮವಾದ ಲಾಭ ಕೊಡುವಂಥ ಮೇಕೆಯ ತಳಿ ಬೀಟಲ್ ತಳಿ ಆಗಿದೆ. ಈ ತಳಿಯ ಮೇಕೆ ಹೆಚ್ಚು ಉತ್ಪಾದನೆ ಮಾಡುತ್ತದೆ, ದಿನಕ್ಕೆ ಸುಮಾರು 4 ಲೀಟರ್ ನಷ್ಟು ಹಾಲನ್ನು ಕೊಡುತ್ತದೆ ಈ ತಳಿಯ ಮೇಕೆ. ಈ ಹಾಲನ್ನು ನೀವು ಮಾರಾಟ ಮಾಡಿದರೆ, ಹಸುವಿನ ಹಾಲಿಗಿಂತ ಹೆಚ್ಚು ದುಡ್ಡಿಗೆ ಮಾರಾಟ ಆಗುತ್ತದೆ. ಈ ಮೂಲಕ ನೀವು ಹೆಚ್ಚಿನ ಲಾಭ ಪಡೆಯಬಹುದು. ಬೀಟಲ್ ತಳಿಯ ಒಂದು ಮೇಕೆಗೆ 30 ಸಾವಿರ ರೂಪಾಯಿ ಆಗುತ್ತದೆ. ಈ ತಳಿಯ ಮೇಕೆಯನ್ನು ಖರೀದಿ ಮಾಡಿ, ಅವುಗಳ ಸಾಕಾಣಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು.

ಸ್ಟೇಟ್ ಬ್ಯಾಂಕಿನಲ್ಲಿ 20 ವರ್ಷಕ್ಕೆ 40 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು? ಬೀಟಲ್ ತಳಿಯ ಮೇಕೆಯ ತೂಕ ಸಹ ಅಷ್ಟೇ ಹೆಚ್ಚಾಗಿ ಇರುತ್ತದೆ. ಒಂದೊಂದು ಮೇಕೆ ಕೂಡ 90 ರಿಂದ 110 ಕೆಜಿ ತೂಕ ಬರುತ್ತದೆ. ಈ ಕಾರಣಕ್ಕೆ ಇವುಗಳನ್ನು ಸಾಕುವ ಮೂಲಕ ಮಾಂಸದ ವಿಷಯದಲ್ಲಿ ಕೂಡ ಹೆಚ್ಚಿನ ಲಾಭ ಪಡೆಯಬಹುದು. ನಮ್ಮ ರಾಜ್ಯದಲ್ಲಿ ಸಹ ಇವುಗಳಿಗೆ ಭಾರಿ ಬೇಡಿಕೆ ಇದ್ದು, ಈ ಮೇಕೆಗಳು ಬಹಳ ಬೇಗ ತೂಕ ಪಡೆಯುತ್ತದೆ. ಪ್ರಸ್ತುತ ನಮ್ಮ ದೇಶದ ಜಾರ್ಖಂಡ್, ಬಿಹಾರ್, ರಾಜಸ್ಥಾನ್, ಉತ್ತರ ಪ್ರದೇಶ ಈ ಎಲ್ಲಾ ರಾಜ್ಯಗಳಲ್ಲಿ ಕೂಡ ಬೀಟಲ್ ತಳಿಯ ಮೇಕೆ ಸಾಕಾಣಿಕೆ ಸಿಗುತ್ತಿದೆ. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್! ಈ ಮೇಕೆಯ ತಳಿಯ ಸಾಕಾಣಿಕೆ ಮಾಡಿದರೆ, ನೀವು ಶ್ರೀಮಂತರಾಗೋದು ಗ್ಯಾರೆಂಟಿ. ನಮ್ಮ ದೇಶ ವ್ಯವಸಾಯ ಹೆಚ್ಚಾಗಿ ಮಾಡುವ ದೇಶ, ಹಾಗಾಗಿ ರೈತರು, ಹಳ್ಳಿಯಲ್ಲಿ ಇರುವವರು ಈ ಕೆಲಸ ಮಾಡಿದರೆ, ಉನ್ನತ ಮಟ್ಟದಲ್ಲಿ ಲಾಭ ಗಳಿಸಬಹುದು. ಪ್ರಸ್ತುತ ಪಂಜಾಬ್ ನಲ್ಲಿ ಬೀಟಲ್ ತಳಿಯ ಮೇಕೆಗಳು ಹೆಚ್ಚಾಗಿದ್ದು, ಬಹಳಷ್ಟು ಜನರು ಪಂಜಾಬ್ ಇಂದ ಈ ಮೇಕೆಗಳನ್ನು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಬಂದು, ಸಾಕಾಣಿಕೆ ಶುರು ಮಾಡಿದ್ದಾರೆ. ನೀವು ಕೂಡ ಇದನ್ನು ಮಾಡಿದರೆ, ಹೆಚ್ಚು ಲಾಭ ಗಳಿಸಬಹುದು. ಒಳ್ಳೆಯ ಬ್ಯುಸಿನೆಸ್ ಐಡಿಯಾ ಇದಾಗಿದೆ.

Advertisement
Next Article