ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

FWICE ನಿಂದ ಮಹತ್ವದ ನಿರ್ಧಾರ: ಲಕ್ಷದ್ವೀಪದಲ್ಲಿ ಚಿತ್ರೀಕರಣ ಮಾಡಲು ನಿರ್ಮಾಪಕರಿಗೆ ಸೂಚನೆ

01:05 PM Jan 11, 2024 IST | Bcsuddi
Advertisement

ಲಕ್ಷದ್ವೀಪ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯಿಂದಾಗಿ ರಾಜತಾಂತ್ರಿಕ ಕಲಹ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಏತನ್ಮಧ್ಯೆ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಮಹತ್ವದ ನಿರ್ಧಾವೊಂದನ್ನು ಘೋಷಣೆ ಮಾಡಿದೆ.

Advertisement

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ FWICE ಎಲ್ಲಾ ಭಾರತೀಯ ಚಲನಚಿತ್ರ ನಿರ್ಮಾಪಕರು ಮಾಲ್ಡೀವ್ಸ್‌ನಲ್ಲಿ ಬುಕಿಂಗ್ ಮಾಡಿದ ಶೂಟಿಂಗ್ ಅನ್ನು ರದ್ದುಗೊಳಿಸುವಂತೆ ಡಿ. ೧೦ ರಂದು ಮನವಿ ಮಾಡಿದೆ. ಇದರೊಂದಿಗೆ ಇನ್ನು ಮುಂದೆ ಭಾರತದಲ್ಲಿ ಲಕ್ಷದ್ವೀಪದಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡಲು ಚಲನಚಿತ್ರ ನಿರ್ಮಾಪಕರನ್ನು ಕೋರಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಮಾಲ್ಡೀವ್ಸ್ ಸಚಿವರು ಮಾಡಿರುವ ಟ್ವೀಟ್‌ಗಳಿಗೆ ಭಾರೀ ವಿರೋಧ ವ್ಯಕ್ತವಾಗಿವೆ. ಇಷ್ಟು ಮಾತ್ರವಲ್ಲದೇ, ಅನೇಕ ಭಾರತೀಯರು, ಮಾಲ್ಡೀವ್ಸ್ ಸಚಿವರ ಹೇಳಿಕೆಗೆ ಪ್ರತಿಯಾಗಿ ತಮ್ಮ ಮಾಲ್ಡೀವ್ಸ್ ಪ್ರವಾಸಗಳನ್ನು ರದ್ದು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇದೀಗ FWICE ನಿಂದ ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುವ ನಿರ್ಧಾರವು ಸಾಮಾಜಿಕ ಜಾಲಣದಲ್ಲಿ ಎಲ್ಲೆಡೆ ಭಾರೀ ಸಂಚಲನವನ್ನು ಸೃಷ್ಟಿಮಾಡಿದೆ.

Advertisement
Next Article