ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾಳೆಯಿಂದ ಚಿತ್ರದುರ್ಗ ಒಳಾಂಗಣ ಈಜುಕೊಳ  ಮೇ 06 ರಿಂದ ಪುನರಾರಂಭ

07:21 AM May 05, 2024 IST | Bcsuddi
Advertisement

 

Advertisement

ಚಿತ್ರದುರ್ಗ: ಚಿತ್ರದುರ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲಾಗುತ್ತಿರುವ ಈಜುಕೊಳವನ್ನು ದುರಸ್ಥಿಗೊಳಿಸಿ ಇದೇ ಮೇ.06 ರಿಂದ ಪುನರ್ ಆರಂಭಿಸಲಾಗುತ್ತದೆ. ಅಂದು ಮಧ್ಯಾಹ್ನ 3 ರಿಂದ 6 ರವರೆಗೆ ಬ್ಯಾಚಸ್‍ಗಳು ಇರುತ್ತವೆ.

ಇನ್ನುಳಿದಂತೆ ಪ್ರತಿದಿನ ಪುರುಷರಿಗೆ ಮತ್ತು ಮಕ್ಕಳಿಗೆ ಬೆಳಿಗ್ಗೆ 6 ರಿಂದ 7 ರವರೆಗೆ ಮತ್ತು 7 ರಿಂದ 8 ರವೆರಗೆ ಹಾಗೂ ಮಧ್ಯಾಹ್ನ 3 ರಿಂದ 4 ರವರೆಗೆ ಮತ್ತು ಮಧ್ಯಾಹ್ನ 4 ರಿಂದ 5 ರವರೆಗೆ ಬ್ಯಾಚಸ್‍ಗಳು ಇರುತ್ತವೆ. ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಸಂಜೆ 5 ರಿಂದ 6 ರವರೆಗೆ ಬ್ಯಾಚಸ್‍ಗಳು ಇರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಶುಲ್ಕದ ವಿವರದ ಬಗ್ಗೆ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ಚಿತ್ರದುರ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags :
From Tomorrow Chitradurga Indoor Swimming Pool reopens from May 06
Advertisement
Next Article