ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ನ್ಯಾಯಾಲಯ ತುರ್ತು ನೋಟಿಸ್.!

08:35 AM Oct 18, 2024 IST | BC Suddi
Advertisement

 

Advertisement

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರದ ಜೆಎಂಎಫ್​ಸಿ ನ್ಯಾಯಾಲಯ ಬಿಗ್ ಬಾಸ್  ಕಾರ್ಯಕ್ರಮಕ್ಕೆ  ತುರ್ತು ನೋಟಿಸ್ ಜಾರಿಗೊಳಿಸಿರುವುದು ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ವಕೀಲೆಯೊಬ್ಬರು ಕಳೆದ ವಾರ ದೂರು ನೀಡಿದ್ದರು.ಇದರ ಬೆನ್ನಲ್ಲೆ ಬಿಗ್ ಬಾಸ್ ವಿರುದ್ಧ ನ್ಯಾಯಾಲಯ ನೋಟಿಸ್ ನೀಡಿದೆ.

ಹೌದು ಬಿಗ್ ಬಾಸ್ 11ರ ಸೀಸನ್​ನಲ್ಲಿ ಅಪರಾಧ ಹಿನ್ನೆಲೆ ಇದ್ದವರನ್ನ ಸ್ಪರ್ಧಿಯಾಗಿ‌ ಸೇರಿಸಿಕೊಳ್ಳಲಾಗಿದೆ. ಇವರ ಮೇಲೆ ಅನೇಕ ಪ್ರಕರಣಗಳಿವೆ. ಇಂತಹವರನ್ನು ಪ್ರತಿ‌ನಿತ್ಯ ಕೋಟ್ಯಂತರ ಮಂದಿ ವೀಕ್ಷಿಸುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಿದೆ ಎಂದು ಆರೋಪಿಸಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರ ನಿಲ್ಲಿಸಬೇಕೆಂದು ಸಾಗರ ವಕೀಲ ಕೆ.ಎಲ್.ಭೋಸರಾಜ್ ಎಂಬುವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಚಾಂದಿನಿ ಜಿ.ಯು. ಅವರು ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ ಅಡಿಯಲ್ಲಿ ವಾಹಿನಿಯ ನಿರ್ಮಾಪಕ ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆ ಅಕ್ಟೋಬರ್ 28ರಂದು ನಡೆಯಲಿದೆ.

Advertisement
Next Article