ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

BSNL ಬಳಕೆದಾರರ ಮುಖದಲ್ಲಿ ಮಂದಹಾಸ...!

10:51 AM Aug 03, 2024 IST | BC Suddi
Advertisement

ಖಾಸಗಿ ಕಂಪನಿಗಳ ರಿಚಾರ್ಜ್‌ ಬೆಲೆಯಲ್ಲಿ ಏರಿಕೆ ಆಗಿದ್ದನೇ ಬಂಡವಾಳ ಮಾಡಿಕೊಂಡಿರುವ ಬಿಎಸ್‌ಎನ್ಎಲ್‌ (BSNL) ಈಗ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಜುಲೈನಲ್ಲಿ ಖಾಸಗಿ ಕಂಪನಿಗಳು ರಿಚಾರ್ಜ್‌ ಪ್ಲ್ಯಾನ್‌ ಹೆಚ್ಚು ಮಾಡಿದ್ದರಿಂದ ಈಗ ಜನರು ಬಿಎಸ್‌ಎನ್‌ಎಲ್‌ನತ್ತ ವಾಲುತ್ತಿದ್ದಾರೆ. ಒಂದೇ ತಿಂಗಳಿನಲ್ಲಿ ಬಿಎಸ್‌ಎನ್‌ಎಲ್‌ ಪೋರ್ಟ್‌ ಆದ ಗ್ರಾಹಕರ ಸಂಖ್ಯೆ 27 ಲಕ್ಷಕ್ಕೆ ಏರಿಕೆ ಆಗಿದೆ.

Advertisement

ಬಿಎಸ್‌ಎನ್‌ಎಲ್‌ ಶೀಘ್ರದಲ್ಲಿ ಭಾರತದ ಆಯ್ದ ಪ್ರದೇಶಗಳಲ್ಲಿ 5ಜಿ ಸೇವೆಗಳನ್ನು ಆರಂಭಿಸಲಿದೆ ಎಂಬ ಮಾಹಿತಿ ಹೊರ ಬಂದಿದ್ದು, ಇದು ನಿಜಕ್ಕೂ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆ ಗೆಡಿಸಿದೆ. ಈ ಸೇವೆಗಳು ಭಾರತದ ಬೆಂಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಮೊದಲೇ ಗ್ರಾಹಕರಿಗೆ ಖುಷಿ ಸುದ್ದಿಯೊಂದು ಬಿಎಸ್‌ಎನ್‌ಎಲ್‌ ನೀಡಿದೆ. BSNL ಶೀಘ್ರದಲ್ಲೇ ತನ್ನ 4G ನೆಟ್‌ವರ್ಕ್ ಅನ್ನು ಬಿಡುಗಡೆ ಮಾಡಲಿದೆ.

ಶೀಘ್ರದಲ್ಲಿ 4ಜಿ ಸೇವೆ ಆರಂಭ
ದೇಶಾದ್ಯಂತ ಬಿಎಸ್‌ಎನ್‌ಎಲ್‌ ಸೇವೆಗಳನ್ನು ಯಾವಗ ಲಾಂಚ್ ಮಾಡಲಾಗುತ್ತದೆ ಎಂಬ ಬಗ್ಗೆ ಕಂಪನಿ ಇನ್ನು ಯಾವುದೇ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ. ಸರ್ಕಾರಿ ಟೆಲಿಕಾಂ ಕಂಪನಿಯು 4G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, BSNL ತನ್ನ 4G ನೆಟ್‌ವರ್ಕ್ ಅನ್ನು ಆಗಸ್ಟ್‌ನಲ್ಲಿ ಆರಂಭಿಸಲಿದೆ ಎಂಬ ವರದಿಗಳು ಈಗ ಬೆಳಕಿಗೆ ಬರುತ್ತಿವೆ.

 

ದೇಶದಲ್ಲಿರುವ 4ಜಿ ಟವರ್‌ಗಳ ಸಂಖ್ಯೆ ಎಷ್ಟು?
4G ಮತ್ತು 5G ನೆಟ್‌ವರ್ಕ್‌ಗಳಿಗಾಗಿ ಬಿಎಸ್‌ಎನ್‌ಎಲ್ ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಹಾಕಲು ಉದ್ದೇಶಿಸಿದೆ ಎಂದು ವರದಿ ಆಗಿದೆ. ದೇಶದಲ್ಲಿ ಕಂಪನಿಯು ಈ ವರೆಗೆ 9,000 4G ಟವರ್‌ಗಳನ್ನು ಹಾಕಿದ್ದು, ಪಂಜಾಬ್‌, ಉತ್ತರ ಪ್ರದೇಶ, ಪಶ್ವಿಮ ಬಂಗಾಳ್, ಹಿಮಾಚಲ ಪ್ರದೇಶ ಮತ್ತು ಹರಿಯಾಣಗಳಲ್ಲಿ ಸುಮಾರು 6,000 ಟವರ್‌ಗಳನ್ನು ಅಳವಡಿಸಲಾಗಿದ್ದು, ಈ ಪ್ರದೇಶದಲ್ಲಿ 4G ಸೇವೆಗಳು ಆರಂಭವಾಗಿವೆ. BSNL 4G ನೆಟ್‌ವರ್ಕ್‌ನಲ್ಲಿ 40-45mbps ವೇಗವನ್ನು ಒದಗಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶಾದ್ಯಂತ ಬಿಎಸ್‌ಎನ್‌ಎಲ್‌ನ 4ಜಿ ನೆಟ್‌ವರ್ಕ್‌ನ ಆರಂಭವಾದಲ್ಲಿ ನಿಜಕ್ಕೂ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆ ಗೆಡಲಿದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ, ಬಿಎಸ್‌ಎನ್‌ಎಲ್‌ ಅಗ್ಗದ ದರದಲ್ಲಿ ಭಾರೀ ಕೊಡುಗೆಗಳನ್ನು ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಆದರೆ 4ಜಿ ಸೇವೆಯ ಥಾರೀಫ್‌ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆಯನ್ನು ಬಿಎಸ್‌ಎನ್‌ಎಲ್ ನೀಡಿಲ್ಲ.

 

ಈಗಾಗಲೇ ಮಾರುಕಟ್ಟೆಯಲ್ಲಿ ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿರುವ ಬಿಎಸ್‌ಎನ್‌ಎಲ್‌ ಸಂಚಲನ ಮೂಡಿಸಿದೆ. ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್‌ ಹಲವು ರಿಚಾರ್ಜ್‌ ಬಿಡುಗಡೆ ಮಾಡಿದೆ. ಇದರಲ್ಲಿ ಕಡಿಮೆ ವ್ಯಾಲಿಡಿಟಿಯಿಂದ ಹಿಡಿದು ಹೆಚ್ಚು ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ. ಅಲ್ಲದೆ ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಇದರ ದರ ಸಹ ಭಾರೀ ಕಡಿಮೆ. ಹೀಗಾಗಿ ಗ್ರಾಹಕರು ಸಹ ಈ ನೆಟ್‌ವರ್ಕ್‌ನತ್ತ ವಾಲುತ್ತಿದ್ದಾರೆ.

Advertisement
Next Article