For the best experience, open
https://m.bcsuddi.com
on your mobile browser.
Advertisement

BREAKING: ಮಿತ್ರಪಕ್ಷಗಳ ಬೆಂಬಲ ಪಡೆದ ಎನ್‌ಡಿಎ - ರಾಷ್ಟ್ರಪತಿಗಳ ಭೇಟಿಗೆ ಸಜ್ಜು

06:29 PM Jun 05, 2024 IST | Bcsuddi
breaking  ಮಿತ್ರಪಕ್ಷಗಳ ಬೆಂಬಲ ಪಡೆದ ಎನ್‌ಡಿಎ   ರಾಷ್ಟ್ರಪತಿಗಳ ಭೇಟಿಗೆ ಸಜ್ಜು
Advertisement

ನವದೆಹಲಿ: ಮಿತ್ರಪಕ್ಷಗಳ ಪೂರ್ಣ ಬೆಂಬಲ ಪಡೆದಿರುವ ಬಿಜೆಪಿ ಯಾವುದೇ ಸಮಯದಲ್ಲಿ ಸರಕಾರ ರಚನೆಯ ಹಕ್ಕು ಸಾಧಿಸಲು ರಾಷ್ಟ್ರಪತಿಗಳ ಬಳಿ ತೆರಳುವ ಸಾಧ್ಯತೆ ಇದೆ. ಮಿತ್ರಪಕ್ಷಗಳಾದ ಜನಸೇನಾ, ಟಿಡಿಪಿ, ಜೆಡಿ(ಯು), ಶಿವಸೇನೆಯ ಶಿಂಧೆ ಬಣ, ಜೆಡಿಎಸ್ ಸೇರಿ ಹಲವಾರು ಪಕ್ಷಗಳು ಮೋದಿಯ ಕೈ ಬಲಪಡಿಸಿವೆ. ಇಂದು ನಡೆದ ಸಭೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳು ಬಿಜೆಪಿಗೆ ಬೆಂಬಲ ಸೂಚಿಸಿವೆ ಹಾಗೂ ಸರಕಾರ ರಚಿಸಲು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಹೀಗಾಗಿ ಯಾವುದೇ ಸಮಯದಲ್ಲಿ ಸರಕಾರ ರಚಿಸುವ ಹಕ್ಕು ಸಾಧಿಸಲು ಎನ್‌ಡಿಎ ಮೈತ್ರಿಕೂಟ ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.

Author Image

Advertisement