ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

9 ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ

10:32 AM Dec 14, 2023 IST | Bcsuddi
Advertisement

ಲಕ್ನೋ: 9 ವರ್ಷದ ಬಾಲಕಿಯೊಬ್ಬಳಿಗೆ ಬೀದಿನಾಯಿಯೊಂದು ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಜ್‌ಗಢ್ ಜಿಲ್ಲೆಯ ಮಚಲ್‌ಪುರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

Advertisement

ಬಾಲಕಿಯನ್ನು ಅರ್ಪಿತಾ ಗುರ್ಜರ್ ಎಂದು ಗುರುತಿಸಲಾಗಿದೆ.

ಬಾಲಕಿಯ ಮೇಲೆ ನಾಯಿ ದಾಳಿ ನಡೆದದ್ದನ್ನು ಕಂಡ ಅಲ್ಲಿದ್ದವರು ಒಬ್ಬರು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬಾಲಕಿಗೆ ಒಟ್ಟು 17 ಹೊಲಿಗೆಗಳನ್ನು ಹಾಕಲಾಗಿದೆ. ಅಲ್ಲೇ ಬಳಿ ಇದ್ದ ಕಿರಾಣಿ ಅಂಗಡಿ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ.

ಅರ್ಪಿತಾ ಗುರ್ಜರ್ ಹೊರತುಪಡಿಸಿ ಅದೇ ದಿನ ಆ ಬೀದಿ ನಾಯಿಯು ನಾಲ್ವರ ಮೇಲೆ ದಾಳಿ ನಡೆಸಿದೆ.
ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿ ಕೆಲವು ಗಂಟೆಗಳ ಹುಡುಕಾಟದ ನಂತರ, ಬೀದಿ ನಾಯಿಯನ್ನು ನಾಗರಿಕ ಮಂಡಳಿಯ ಅಧಿಕಾರಿಗಳು ಪತ್ತೆ ಹಚ್ಚಿ ಹತ್ಯೆ ಮಾಡಿದ್ದಾರೆ.

Advertisement
Next Article