ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ- ದಿನಾಂಕ ಘೋಷಣೆ

02:50 PM Jun 10, 2024 IST | Bcsuddi
Advertisement

ನವದೆಹಲಿ: ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳು ಸೇರಿ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.

Advertisement

ಜುಲೈ 10 ರಂದು ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ರುಪೌಲಿ (ಬಿಹಾರ), ರಾಯ್ಗಂಜ್, ರಣಘಾಟ್ ದಕ್ಷಿಣ, ಬಾಗ್ಡಾ ಮತ್ತು ಮಾಣಿಕ್ತಾಲಾ (ಪಶ್ಚಿಮ ಬಂಗಾಳ), ವಿಕ್ರವಂಡಿ (ತಮಿಳುನಾಡು), ಅಮರವಾರ(ಮಧ್ಯಪ್ರದೇ ಶ), ಬದರಿನಾಥ್ ಮತ್ತು ಮಂಗಳೌರ್ (ಉತ್ತರಾಖಂಡ), ಜಲಂಧರ್ ಪಶ್ಚಿಮ (ಪಂಜಾಬ್) ಮತ್ತು ಡೆಹ್ರಾ, ಹಮೀರ್ಪುರ ಮತ್ತು ನಲಗಢ (ಹಿಮಾಚಲ ಪ್ರದೇಶ) ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ನಡೆಯಲಿವೆ.

ಜೂನ್ 14ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಜೂನ್ 21ರಂ ದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 24ರಂದು ಮತಯಂತ್ರಗಳ
ಪರಿಶೀ ಲನೆ ನಡೆಯಲಿದ್ದು, 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಜುಲೈ 13 ರಂ ದು ಮತಎಣಿಕೆ ನಡೆಯಲಿದ್ದು, ಜುಲೈ 15ರೊಳಗೆ ಉಪಚುನಾವಣೆ ಪೂರ್ಣ ಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.ಹಾಲಿ ಸದಸ್ಯರು ಮೃತಪಟ್ಟರೆ ಅಥವಾ ರಾಜೀನಾಮೆಯಿಂದ ಅವರ ಸ್ಥಾನ ತೆರವಾದರೆ ಉಪಚುನಾವಣೆ ನಡೆಯಲಿದೆ

 

Advertisement
Next Article