For the best experience, open
https://m.bcsuddi.com
on your mobile browser.
Advertisement

5 ತಿಂಗಳ ಸಂಬಳ ದೊರೆಯದೆ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗಳ ಪರದಾಟ..!

12:08 PM Jul 18, 2024 IST | Bcsuddi
5 ತಿಂಗಳ ಸಂಬಳ ದೊರೆಯದೆ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗಳ ಪರದಾಟ
Advertisement

ಬೇರೆ ಊರುಗಳಿಂದ ಬರುವ ಪ್ರಯಾಣಿಕರ, ಬಡವರ, ದಿನಗೂಲಿ ಕಾರ್ಮಿಕರ ಅನುಕೂಲಕ್ಕಾಗಿ ಸರಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬೀದರ್‌ನ 35 ಜನ ಸಿಬ್ಬಂದಿಗೆ ಬರೋಬರಿ 5 ತಿಂಗಳಿಂದ ಸಂಬಳವೇ ಇಲ್ಲದಂತಾಗಿದೆ.

ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಮರ್ಪಕ ವೇತನ ಪಾವತಿಯಾಗದ ಕಾರಣ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಎಫೆಕ್ಟ್‌ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗೂ ತಟ್ಟಿದೆ ಎನ್ನಬಹುದಾಗಿದೆ.

Advertisement
Author Image

Advertisement