ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ತವಾ ಪನ್ನೀರ್ ಮಸಾಲ ಮಾಡುವ ವಿಧಾನ

09:08 AM Aug 10, 2024 IST | BC Suddi
Advertisement

ಪನ್ನೀರಿನಿಂದ ತಯಾರಿಸಲಾಗುವ ವಿಶೇಷ ತಿನಿಸುಗಳು ಹಲವು. ಅವುಗಳಲ್ಲಿ ತವಾ ಪನ್ನೀರ್ ಮಸಾಲವೂ ಒಂದು. ಇದು ಸೊಗಸಾದ ಪರಿಮಳ ಹಾಗೂ ಅದ್ಭುತ ರುಚಿಯಿಂದ ಕೂಡಿರುತ್ತದೆ.

Advertisement

ಬೇಕಾಗುವ ಸಾಮಾಗ್ರಿಗಳು : ಕತ್ತರಿಸಿದ ಪನ್ನೀರ್ – 2 ಕಪ್, ಟೊಮೆಟೊ – 4-5, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೆಂಪು ಮೆಣಸು – 1 ಚಮಚ, ಬೆಣ್ಣೆ ಸ್ವಲ್ಪ, ಮೆಂತೆ ಪುಡಿ – ಒಂದು ಚಿಟಕಿ, ಕೆನೆ -1 ಟೇಬಲ್ ಚಮಚ, ವಿನೆಗರ್‌ನಲ್ಲಿ ನೆನೆಸಿದ ಬೀಟ್ರೂಟ್ ಹೋಳುಗಳು – 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ತುಪ್ಪ, ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಟೊಮೆಟೋವನ್ನು 10-12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೆಂದ ಟೊಮೆಟೊ ತಣ್ಣಗಾದ ಮೇಲೆ ಅದನ್ನು ನುಣ್ಣಗೆ ರುಬ್ಬಿ, ಪಕ್ಕಕ್ಕೆ ಇಡಿ. ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಹಾಕಿ ಕರಗಲು ಬಿಡಿ. ಅದಕ್ಕೆ ಕೆಂಪು ಮೆಣಸನ್ನು ಸೇರಿಸಿ. ಬೆಣ್ಣೆ ಮತ್ತು ಮೆಣಸನ್ನು ಟೊಮೆಟೋ ಪೇಸ್ಟ್ ಗೆ ಸೇರಿಸಿ, ಕುದಿಯಲು ಇಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ವಿನೆಗರ್‌ನಲ್ಲಿ ನೆನೆಸಿಕೊಂಡ ಬೀಟ್ರೂಟ್ ಅನ್ನು ಸೇರಿಸಿ, ಕತ್ತರಿಸಿಕೊಂಡ ಪನ್ನೀರ್ ಅನ್ನು ಸ್ವಲ್ಪ ಹುರಿದು ಗ್ರೇವಿಗೆ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಂತೆ ಪುಡಿ, ಕೆನೆ ಮತ್ತು ತುಪ್ಪ ಸೇರಿಸಿ, ಸ್ವಲ್ಪ ಸಮಯ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.

Advertisement
Next Article