ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

41 ಕಾರ್ಮಿಕರ ರಕ್ಷಣೆ: ಉತ್ತರಾಖಂಡ ಸಿಎಂ ಘೋಷಿಸಿದ ಬಹುಮಾನ ತಿರಸ್ಕರಿಸಿದ ವಕೀಲ್ ಹಸನ್

11:54 AM Dec 02, 2023 IST | Bcsuddi
Advertisement

ಡೆಹ್ರಾಡೂನ್: ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿಕೊಂಡ 41 ಮಂದಿ ಕಾರ್ಮಿಕರನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರ‍್ಯಾಟ್ ಹೋಲ್ ಮೈನ ತಂಡದ ಮುಖ್ಯಸ್ಥ ವಕೀಲ್ ಹಸನ್ ಉತ್ತರಾಖಂಡ ಸಿಎಂ ಘೋಷಿಸಿದ್ದ ಬಹುಮಾನವನ್ನು ತಿರಸ್ಕರಿಸಿ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದ್ದಾರೆ.

Advertisement

ರ‍್ಯಾಟ್ ಹೋಲ್ ಮೈನರ್ಸ್ ತಂಡದ ಸಾಹಸವನ್ನು ಮೆಚ್ಚಿ ಉತ್ತರಾಖಂಡ ಸಿಎಂ ಪುಷ್ಕರ್ ದಾಮಿ ಬಹುಮಾನ ಘೋಷಣೆ ಮಾಡಿದ್ದರು.ಆದರೆ ಅದನ್ನು ಹಸನ್‌ ತಿರಸ್ಕರಿಸಿ ಹಣಕ್ಕಿಂತ ಹೆಚ್ಚಾಗಿ ವೃತ್ತಿ ಹಾಗೂ ಮಾನವೀಯತೆಗೆ ನಾನು ಬೆಲೆ ಕೊಡುತ್ತೇನೆ. ಒಬ್ಬಂಟಿಯಾಗಿ ಯಾರೂ ಈ ಕಾರ್ಯ ಮಾಡಲು ಸಾಧ್ಯವಿರಲಿಲ್ಲ.

ಪ್ರತಿಯೊಬ್ಬರಿಗೂ ನಾನು ನೀಡಲು ಬಯಸುವ ಸಂದೇಶವೆಂದನೆಂದರೆ ನಾವು ಸಾಮರಸ್ಯದ ಬಾಳ್ವೆ ನಡೆಸಬೇಕು ಹಾಗೂ ದ್ವೇಷದ ವಿಷ ಹರಡಬಾರದು ಎಂದು ಹಸನ್ ಹೇಳಿದ್ದಾರೆ.ಉದ್ದದ ಒಳಚರಂಡಿ ಮತ್ತು ನೀರಿನ ಪೈಪ್ಲೈನ್ ಅಳವಡಿಸಲು ಚಿಕ್ಕ ಸುರಂಗಗಳನ್ನು ಕೊರೆಯುವಲ್ಲಿ ಹಸನ್ ತಂಡ ಪರಿಣತಿ ಹೊಂದಿತ್ತು.ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಕಾರ್ಯಚರಣೆ ಇದುವರೆಗೆ ಮಾಡಿಲ್ಲ ಎಂದು ಹೇಳಿದರು.

Advertisement
Next Article