ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?

10:54 AM Apr 25, 2024 IST | Bcsuddi
Advertisement

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.

Advertisement

ಬ್ಲೂಮ್‌ಬರ್ಗ್ ವರದಿ ಮಾಡಿರೋ ಶ್ರೀಮಂತರು

ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್‌ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.

ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.

ಯಾವುದು ಆ ಕುಟುಂಬ?ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ  ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್‌-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್‌ಗಳು ಇವರ ಬಳಿ ಇದೆ.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್‌ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್‌ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್‌ನ ಹೆಸರುಗಳನ್ನು ಸಹ ಒಳಗೊಂಡಿದೆ.

Advertisement
Next Article