ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

300 ರೂ. ಮೌಲ್ಯದ ಆಭರಣಕ್ಕೆ 6 ಕೋಟಿ ರೂ. ಕೊಟ್ಟು ಖರೀದಿಸಿ ಮೋಸ ಹೋದ ಅಮೆರಿಕ ಮಹಿಳೆ

11:51 AM Jun 12, 2024 IST | Bcsuddi
Advertisement

ಜೈಪುರ : ಅಮೆರಿಕ ಮೂಲದ ಮಹಿಳೆಯೊಬ್ಬರು ಭಾರತ ಪ್ರವಾಸ ಕೈಗೊಂಡಾಗ, ಜೈಪುರದಲ್ಲಿ ವ್ಯಾಪಾರಿಯೊಬ್ಬರ ಬಳಿ ಚಿನ್ನಾಭರಣವೊಂದನ್ನು ಬರೋಬ್ಬರಿ 6 ಕೋಟಿ ರೂ. ಕೊಟ್ಟು ಖರೀದಿಸಿದ್ದರು. ಆದರೆ, ತಾನು ಕೊಂಡುಕೊಂಡಿದ್ದು ಅಸಲಿ ಚಿನ್ನವಲ್ಲ, ಬದಲಿಗೆ ಕೃತಕ ಆಭರಣ ಎಂಬ ಶಾಕಿಂಗ್ ಸಂಗತಿ ತಿಳಿದು ಭಾರೀ ಆಘಾತಕ್ಕೊಳಗಾದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

Advertisement

ಜೈಪುರ ಮೂಲದ ಅಂಗಡಿಯವರೊಬ್ಬರಿಂದ 300 ರೂ. ಮೌಲ್ಯದ ವಸ್ತುವನ್ನು 6 ಕೋಟಿ ರೂ. ಕೊಟ್ಟು ಖರೀದಿಸಿದ್ದ ಅಮೆರಿಕಾದ ಮಹಿಳೆ, ತಾನು ವ್ಯಾಪಾರಿಯ ಮೋಸದ ಜಾಲಕ್ಕೆ ಸಿಲುಕಿರುವ ವಿಷಯ ತನ್ನ ತಾಯ್ನಾಡಿಗೆ ಮರಳುವವರೆಗೂ ತಿಳಿದುಬಂದಿಲ್ಲ. ಆದ್ರೆ, ಈ ವರ್ಷ ಅಮೆರಿಕಾದಲ್ಲಿ ಏಪ್ರಿಲ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚೆರಿಶ್ ತಮ್ಮ ಬಳಿಯಿದ್ದ ವಸ್ತುಗಳನ್ನು ಪ್ರದರ್ಶಿಸಿದಾಗ ಈ ಹಗರಣ ಬೆಳಕಿಗೆ ಬಂದಿದೆ. ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ, ಗೌರವ್ ಸೋನಿ ಎಂದು ಪತ್ತೆ ಹಚ್ಚಲಾದ ಜೈಪುರದ ಅಂಗಡಿಯ ಮಾಲೀಕನನ್ನು ಹುಡುಕಿಕೊಂಡು ಆಕೆ ಭಾರತಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಇನ್ನು ಅಂಗಡಿ ಮಾಲೀಕನನ್ನು ಪ್ರಶ್ನಿಸಲು ಬಂದ ವಿದೇಶಿ ಮಹಿಳೆ, ಕೃತಕ ಆಭರಣಗಳಿಗಾಗಿ ನನ್ನಿಂದ 6 ಕೋಟಿ ರೂ. ಪಾವತಿ ಮಾಡಿಕೊಂಡು, ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಮೆರಿಕನ್ ಮಹಿಳೆ ಚೆರಿಶ್​ ನಿಜವಾದ ಚಿನ್ನದ ಆಭರಣಗಳು ಎಂದು ಊಹಿಸಿ, ಖರೀದಿಸಿದ ವಸ್ತುಗಳು ಅಸಲಿಗೆ ಚಿನ್ನದ ಪಾಲಿಶ್ ಹೊಂದಿರುವ ನಕಲಿ ತುಣುಕುಗಳಾಗಿವೆ. ಇದರ ಬೆನ್ನಲ್ಲೇ ಜೈಪುರ ಪೊಲೀಸರಿಗೆ ದೂರು ಸಲ್ಲಿಸಿರುವ ಮಹಿಳೆ, ಈ ವಿಷಯದಲ್ಲಿ ಯುಎಸ್ ರಾಯಭಾರ ಕಚೇರಿಯ ಸಹಾಯವನ್ನು ಸಹ ಕೋರಿದ್ದಾರೆ.

Advertisement
Next Article