For the best experience, open
https://m.bcsuddi.com
on your mobile browser.
Advertisement

3 ಮತ್ತು4 ರಂದು  ಬರಿಹಣ್ಣಿನಿಂದ ಆಕಾಶದಲ್ಲಿ ಗ್ರಹಗಳ ಪರೇಡ್.!

05:22 PM Jun 02, 2024 IST | Bcsuddi
3 ಮತ್ತು4 ರಂದು  ಬರಿಹಣ್ಣಿನಿಂದ ಆಕಾಶದಲ್ಲಿ ಗ್ರಹಗಳ ಪರೇಡ್
Advertisement

ಬೆಂಗಳೂರು: ಬಾಹ್ಯಾಕಾಶದಲ್ಲಿ ಆಗಾಗ್ಗೆ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಈಗ ನಮ್ಮ ಸೌರವ್ಯೂಹದ 3-4 ಗ್ರಹಗಳು ಒಂದೇ ಸಾಲಿನಲ್ಲಿ ಇರುವುದನ್ನು ಬರಿಗಣ್ಣಿನಲ್ಲಿಯೇ ನೋಡಬಹುದಾಗಿದೆ. ಜೂನ್ 3 ರಿಂದ 5 ರವರೆಗೆ ಗ್ರಹಗಳ ಪರೇಡ್ ನ್ನು ನೋಡಿ ಆನಂದಿಸಬಹುದಾಗಿದೆ.

ಬೆಳಗಿನ ಜಾವ 5 ಗಂಟೆಯಿಂದ 5.30 ರ ಒಳಗೆ ದಿಗಂತದಲ್ಲಿ ಬುಧಗ್ರಹ, ಗುರುಗ್ರಹ, ನಂತರ ಮಂಗಳ ಹಾಗೂ ಅದರ ಮೇಲೆ ಶನಿಗ್ರಹಗಳು ಇರುವುದನ್ನು ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶ. ಇವುಗಳನ್ನು ವೀಕ್ಷಿಸಲು ಯಾವುದೇ ದೂರದರ್ಶಕ, ಬೈನಾಕ್ಯುಲರ್ ಗಳ ಅವಶ್ಯಕತೆ ಇಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

Advertisement

Tags :
Author Image

Advertisement