ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

3ನೇ ಮಗು ಹುಟ್ಟಿದ್ದಕ್ಕೆ ಬಿಜೆಪಿ ಸದಸ್ಯರ ಪಾಲಿಕೆ ಸದಸ್ಯತ್ವ ರದ್ದು..!

01:43 PM May 25, 2024 IST | Bcsuddi
Advertisement

ಅಹಮದಾಬಾದ್ : ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.

Advertisement

ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕಾರ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ಅಮೇಲಿ ಜಿಲ್ಲಾಧಿಕಾರಿಗೆ ದೊರಕಿದೆ. ಹೀಗಾಗಿ, ಇಬ್ಬರನ್ನೂ ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತಾವು ಸ್ಪರ್ಧಿಸುವಾಗ ತಮಗೆ 2 ಮಕ್ಕಳಿದ್ದವು. 3ನೇ ಮಗು ತಮ್ಮ ಆಯ್ಕೆ ನಂತರ ಆಗಿದೆ ಎಂದು ವಾದಿಸಿದರೂ ಅವರ ವಾದ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ನಿಯಮಾನುಸಾರ, ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವವನ್ನು ರದ್ದು ಮಾಡಿದ್ದಾರೆ.

ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹ ಬಿಜೆಪಿ ಸದಸ್ಯರು. 2005-06 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೆ ಇವರು ಅನರ್ಹರಾಗಲಿದ್ದಾರೆ ಎಂಬ ಎಂಬ ನಿಯಮ ಸೇರಿಸಿದ್ದರು.

Advertisement
Next Article