For the best experience, open
https://m.bcsuddi.com
on your mobile browser.
Advertisement

3ನೇ ಬಾರಿಗೆ ಜೀವ ಬೆದರಿಕೆ ಇಮೇಲ್, 400 ಕೋಟಿ ರೂ.ಗೆ ಬೇಡಿಕೆ : ಮುಕೇಶ್ ಅಂಬಾನಿ ಭದ್ರತೆ ಹೆಚ್ಚಳ

01:47 PM Oct 31, 2023 IST | Bcsuddi
3ನೇ ಬಾರಿಗೆ ಜೀವ ಬೆದರಿಕೆ ಇಮೇಲ್  400 ಕೋಟಿ ರೂ ಗೆ ಬೇಡಿಕೆ   ಮುಕೇಶ್ ಅಂಬಾನಿ ಭದ್ರತೆ ಹೆಚ್ಚಳ
Advertisement

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಒಂದೇ ವಾರದಲ್ಲಿ 3ನೇ ಬಾರಿಗೆ ಕೊಲೆ ಬೆದರಿಕೆ ಬಂದಿದೆ . ಹಣದ ಬೇಡಿಕೆಯಿಟ್ಟು ಇ- ಮೇಲ್ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿದ್ದಾನೆ.

ಸೋಮವಾರ ಇಮೇಲ್‌ನಲ್ಲಿ ಮತ್ತೊಂದು ಬೆದರಿಕೆ ಮೇಲ್ ಬಂದಿದ್ದು, ಬೇಡಿಕೆ ಮೊತ್ತವನ್ನು 200 ಕೋಟಿ ರೂ.ನಿಂದ 400 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಈ ಬಗ್ಗೆ ಮುಂಬೈನ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಿಮಗೆ ಎಷ್ಟೇ ಉತ್ತಮ ಭದ್ರತೆ ಇದ್ದರೂ, ನಮ್ಮ ಓರ್ವ ಸ್ನೈಪರ್‌ ನಿಮ್ಮನ್ನು ಕೊಲ್ಲುತ್ತಾನೆ. ನಮ್ಮಮ್ಮ ಪತ್ತೆ ಮಾಡುವುದಕ್ಕಾಗಲಿ, ಬಂಧಿಸುವುದಕ್ಕಾಗಲಿ ಸಾಧ್ಯವಿಲ್ಲ ಎಂದೂ ಇಮೇಲ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಸಿದ್ದಾನೆ.

3ನೇ ಬಾರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಮುಂಬೈನ ಅಪರಾಧ ವಿಭಾಗ ಮತ್ತು ಸೈಬರ್ ತಂಡಗಳು ಇ–ಮೇಲ್ ಕಳುಹಿಸುವವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Author Image

Advertisement