ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

3ನೇ ಅಂತರಿಕ್ಷಯಾನ ಆರಂಭಿಸಿದ ಸುನಿತಾ ವಿಲಿಯಮ್ಸ್

09:59 AM Jun 07, 2024 IST | Bcsuddi
Advertisement

ವಾಷಿಂಗ್ಟನ್: ಭಾರತ–ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ನಾಸಾ ಗಗನಯಾತ್ರಿ ಬುಚ್ ವಿಲ್ಮೋ ರ್ ಅವರನ್ನು ಒಳಗೊಂಡ ಬಾಹ್ಯಾಕಾಶ ನೌಕೆಯು ಅಂತರರಾಷ್ಟ್ರೀ ಯ ಬಾಹ್ಯಾಕಾಶ ನಿಲ್ದಾಣಕ್ಕೆ ಚಿಮ್ಮಿದೆ.

Advertisement

ಹಲವು ಬಾರಿ ವಿಳಂಬದ ಬಳಿಕ ಫ್ಲಾರಿಡಾದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ಕೇಂದ್ರದಿಂದ ಪ್ರಯೋಗಾರ್ಥ ನೌಕೆಯ ಉಡ್ಡಯನ ನಡೆದಿದೆ. ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಇದಾಗಿದ್ದು,ಯಾನ ಆರಂಭಕ್ಕೂ ಮುನ್ನ ನಡೆ ಕ್ಯಾಲಿಪ್ಸೊ(ಬಾಹ್ಯಾಕಾಶ ನೌಕೆಯ ಹೆಸರು), ನಮ್ಮನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಮತ್ತೆ ವಾಪಸ್ ಕರೆದುಕೊಂಡು ಬಾ ಎಂದು ಬಾಹ್ಯಾಕಾಶ ನೌಕೆಗೆ ಸುನಿತಾ ಸಂದೇಶ ನೀಡಿದ್ದಾರೆ.

58 ವರ್ಷ ವಯಸ್ಸಿನ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಪರೀಕ್ಷಾರ್ಥ ನೌಕೆಯಲ್ಲಿ ಅಂತರಿಕ್ಷಯಾನ ಆರಂಭಿಸಿದ್ದಾರೆ. ಸ್ಟಾರ್ಲೈ ನರ್ ಬಾಹ್ಯಾಕಾಶ ನೌಕೆಯ ಆರಂಭಿಕ ಪರೀ ಕ್ಷೆಗಳನ್ನು ನಡೆಸುವಲ್ಲಿ ಸುನಿತಾ ಮತ್ತು ಬುಚ್ ವಿಲ್ಮೋ ರ್ ಬಹಳ ಶ್ರಮಪಟ್ಟಿದ್ದಾರೆ ಎಂದು ನಾಸಾ ಗುರುವಾರ ಬೆಳಿಗ್ಗೆ ತಿಳಿಸಿದೆ.

ಸ್ಟಾರ್ಲೈ ನರ್ ಬಾಹ್ಯಾಕಾಶ ನೌಕೆಯು ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪುವ ನಿರೀಕ್ಷೆ ಇದೆ.

 

Advertisement
Next Article