For the best experience, open
https://m.bcsuddi.com
on your mobile browser.
Advertisement

2,800 ವರ್ಷಗಳಷ್ಟು ಹಳೆಯ ಮಾನವ ವಸಾಹತುಗಳ ಅವಶೇಷಗಳು ಪತ್ತೆ

12:57 PM Jan 17, 2024 IST | Bcsuddi
2 800 ವರ್ಷಗಳಷ್ಟು ಹಳೆಯ ಮಾನವ ವಸಾಹತುಗಳ ಅವಶೇಷಗಳು ಪತ್ತೆ
Advertisement

ಗುಜರಾತ್: ಪ್ರಧಾನಿ ನರೇಂದ್ರ ಮೋದಿಯವರ ತವರು ಗ್ರಾಮದಲ್ಲಿ 2,800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತುಗಳ ಅವಶೇಷಗಳು ಪತ್ತೆಯಾಗಿದೆ. ಇದು ಭಾರತದಲ್ಲಿ ಇದುವರೆಗೆ ಪತ್ತೆಯಾದ ಒಂದೇ ಕೋಟೆಯೊಳಗೆ ವಾಸಿಸವಾಗಿದ್ದ ಅತ್ಯಂತ ಹಳೆಯ ನಗರವಾಗಿದೆ.

ಗುಜರಾತ್‌ನ ವಡ್ನಗರದಲ್ಲಿ ಐಐಟಿ ಖರಗ್ಪುರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ), ಭೌತಿಕ ಸಂಶೋಧನಾ ಪ್ರಯೋಗಾಲಯ (ಪಿಆರ್ಎಲ್), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಮತ್ತು ಡೆಕ್ಕನ್ ಕಾಲೇಜಿನ ಸಂಶೋಧಕರು ಮಾನವ ವಸಾಹತುಗಳ ಅವಶೇಷಗಳನ್ನು ಪತ್ತೆಮಾಡಿದ್ದಾರೆ.

800 BC ಯಷ್ಟು ಹಳೆಯದಾದ ಮಾನವ ವಸಾಹತು ಏಳು ಸಾಂಸ್ಕೃತಿಕ ಹಂತಗಳ ಇರುವಿಕೆಯನ್ನು ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ 2016 ರಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಸಂಶೋಧನಾ ತಂಡ 20 ಮೀಟರ್ ಆಳಕ್ಕೆ ನೆಲವನ್ನು ಅಗೆದಿದೆ ಎಂದು ಐಐಟಿ ಖರಗ್ಪುರದ ಭೂವಿಜ್ಞಾನ ಮತ್ತು ಭೂ ಭೌತಶಾಸ್ತ್ರದ ಪ್ರಾಧ್ಯಾಪಕ ಡಾ.ಅನಿಂಧ್ಯಾ ಸರ್ಕಾರ್ ತಿಳಿಸಿದ್ದಾರೆ.

Advertisement

ಈ ಕುರಿತಾದ ಸಂಶೋಧನೆಗಳು 'ಕ್ವಾಟರ್ನರಿ ಸೈನ್ಸ್ ರಿವ್ಯೂಸ್' ಜರ್ನಲ್ ನಲ್ಲಿ "ಕ್ಲೈಮೆಟ್, ಹ್ಯುಮನ್ ಸೆಟಲ್ ಮೆಂಟ್, ಆಡ್ ಮೈಗ್ರೇಷನ್ ಇನ್ ಸೌತ್ ಏಷಿಯಾ ಫ್ರಂ ಅರ್ಲಿ ಹಿಸ್ಟೋರಿಕ್ ಟು ಮಿಡೀವಲ್ ಪಿರಿಯಡ್: ಎವಿಡೆನ್ಸ್ ಫ್ರಂ ನ್ಯೂ ಅರ್ಕಲಜಿಕಲ್ ಎಸ್ಕವೇಶನ್ ಎಟ್ ವಡ್ನಗರ್, ವೆಸ್ಟರ್ನ್ ಇಂಡಿಯಾ’ ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಬಿಡುಗಡೆಯಾಗುತ್ತಿತ್ತು.

ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳಲ್ಲಿ ಕುಂಬಾರಿಕೆ, ತಾಮ್ರ, ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ವಸ್ತುಗಳು ಮತ್ತು ಸಂಕೀರ್ಣ ವಿನ್ಯಾಸದ ಬಳೆಗಳು ಸೇರಿವೆ ವಡ್ನಗರದಲ್ಲಿ ಇಂಡೋ-ಗ್ರೀಕ್ ಆಳ್ವಿಕೆಯಲ್ಲಿದ್ದ ಗ್ರೀಕ್ ರಾಜ ಅಪೊಲೊಡಾಟಸ್ನ ನಾಣ್ಯ ಅಚ್ಚುಗಳು ಸಹ ಕಂಡುಬಂದಿವೆ.

Author Image

Advertisement