For the best experience, open
https://m.bcsuddi.com
on your mobile browser.
Advertisement

26ನೇ ವಯಸ್ಸಿನಲ್ಲಿ UPSC ಪಾಸ್ ಮಾಡಿ IAS ಆದ ಶ್ರದ್ಧಾ ಗೋಮ್

11:23 AM Oct 06, 2024 IST | BC Suddi
26ನೇ ವಯಸ್ಸಿನಲ್ಲಿ upsc ಪಾಸ್ ಮಾಡಿ ias ಆದ ಶ್ರದ್ಧಾ ಗೋಮ್
Advertisement

ಮಧ್ಯಪ್ರದೇಶ :ಕಾನೂನು ಪದವೀಧರೆಯಾದ ಶ್ರದ್ಧಾ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಐಎಎಸ್ ಅಧಿಕಾರಿ ಶ್ರದ್ಧಾ ಗೋಮ್ ಅವರ ಯುಪಿಎಸ್ಸಿ ಪಯಣದ ಬಗ್ಗೆ ತಿಳಿಯೋಣ.

ಶ್ರದ್ಧಾ ಮಧ್ಯಪ್ರದೇಶದ ಇಂದೋರ್ ನಿವಾಸಿ. ದೇಶದ ಹೆಸರಾಂತ ಕಾನೂನು ಕಾಲೇಜಿನಲ್ಲಿ ಓದಿದ್ದಾರೆ. ಅನೇಕ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದರು. ನಂತರ ವಕೀಲಿಯಾಗಿ ತನ್ನ ಕರ್ತವ್ಯವನ್ನು ಪೂರೈಸಲು ಲಂಡನ್‌ ಗೆ ಹೋದರು. ಅಲ್ಲಿಂದ ಮರಳಿ ಬಂದ ಬಳಿಕ UPSC ಪರೀಕ್ಷೆಗೆ ತಯಾರಿ ನಡೆಸಿ ಅದರಲ್ಲಿಯೂ ಯಶಸ್ವಿಯಾಗಿದ್ದಾರೆ.

ಶ್ರದ್ಧಾ ಗೋಮ್ 26 ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ತಂದೆ ರಮೇಶ್ ಕುಮಾರ್ ಗೋಮೆ ನಿವೃತ್ತ ಎಸ್‌ ಬಿಐ ಅಧಿಕಾರಿ ಮತ್ತು ತಾಯಿ ವಂದನಾ ಗೃಹಿಣಿ.

Advertisement

ಶ್ರದ್ಧಾ CBSE 10 ಮತ್ತು 12 ನೇ ಎರಡೂ ಪರೀಕ್ಷೆಗಳಲ್ಲಿ ಇಂದೋರ್ ಟಾಪರ್ . ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಅಂದರೆ CLAT ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ನಂತರ, ಅವರು NLSIU ಬೆಂಗಳೂರಿನಲ್ಲಿ ಪ್ರವೇಶ ಪಡೆದರು.

2018ರಲ್ಲಿ ಬಿಎ ಎಲ್ ‌ಎಲ್‌ ಬಿ ಪಾಸಾದ ಶ್ರದ್ಧಾ ಗೋಮೆ 13 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪದವಿ ಮುಗಿದ ಕೂಡಲೇ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ನಲ್ಲಿ ಕಾನೂನು ವ್ಯವಸ್ಥಾಪಕರಾಗಿ ಕೆಲಸ ಸಿಕ್ಕಿತು. ನಂತರ ಲಂಡನ್ ಮತ್ತು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ವಯಂ ಅಧ್ಯಯನದ ಮೂಲಕ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲಿಯೇ 60ನೇ ರ್ಯಾಂಕ್ ಗಳಿಸಿ IAS ಅಧಿಕಾರಿಯಾಗಿದ್ದಾರೆ. ಅವರಿಗೆ ರಾಜಸ್ಥಾನ ಕೇಡರ್‌ ನೀಡಲಾಗಿದೆ.

Author Image

Advertisement