For the best experience, open
https://m.bcsuddi.com
on your mobile browser.
Advertisement

250 ಜೊತೆ ಬಟ್ಟೆಗಳನ್ನು ಹೊಂದಿದ್ದೇನೆ ಎಂಬುದೇ ನಾನು ಎದುರಿಸಿದ ದೊಡ್ಡ ಆರೋಪ-ಮೋದಿ

03:40 PM May 21, 2024 IST | Bcsuddi
250 ಜೊತೆ ಬಟ್ಟೆಗಳನ್ನು ಹೊಂದಿದ್ದೇನೆ ಎಂಬುದೇ ನಾನು ಎದುರಿಸಿದ ದೊಡ್ಡ ಆರೋಪ ಮೋದಿ
Advertisement

ಭುವನೇಶ್ವರ: ನನ್ನ ಬಳಿ 250 ಜೊತೆ ಬಟ್ಟೆಗಳು ಇವೆ ಎಂಬುದು ನನ್ನ ರಾಜಕೀಯ ಜೀವನದಲ್ಲಿ ನಾಣು ಎದುರಿಸಿದ ದೊಡ್ಡ ಆರೋಪ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, 'ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್‌ ನಾಯಕ ಮತ್ತು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಅಮರಸಿನ್ಹ ಚೌದರಿ ಅವರು ನನ್ನ ಬಟ್ಟೆಯ ಬಗ್ಗೆ ಮಾತನಾಡಿದ್ದರು'.

'ಅಲ್ಲಿಯೇ ಜನರನ್ನು ಕೇಳಿದೆ, ₹250 ಕೋಟಿ ಹಣವನ್ನು ಲೂಟಿ ಮಾಡುವ ಮುಖ್ಯಮಂತ್ರಿ ಬೇಕೋ ಅಥವಾ 250 ಜೊತೆ ಬಟ್ಟೆಗಳಿರುವ ವ್ಯಕ್ತಿ ಬೇಕೋ ಎಂದು. ಆಗ ಜನರು 250 ಜೊತೆ ಬಟ್ಟೆಗಳಿರುವ ಮುಖ್ಯಮಂತ್ರಿ ಬೇಕು ಎಂದು ಉತ್ತರಿಸಿದರು.

Advertisement

ನನ್ನ ಮೇಲೆ ಆರೋಪ ಮಾಡುವ ಧೈರ್ಯವನ್ನು ಪ್ರತಿಪಕ್ಷಗಳು ಎಂದಿಗೂ ಗಳಿಸಲಿಲ್ಲ' ಎಂದು ಮೋದಿ ಹೇಳಿದ್ದಾರೆ. ಆ ಸನ್ನಿವೇಶವನ್ನು ನೆನೆಸಿಕೊಂಡ ಮೋದಿ, 'ಆ ದಿನ ಸಾರ್ವಜನಿಕ ಸಭೆಯೊಂದಿತ್ತು. ಈ ಆರೋಪವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ನಾನು ಹೇಳಿದೆ.

ಆದರೆ ಅವರು ಆರೋಪ ಮಾಡಿದ 250ರಲ್ಲಿ ಒಂದೋ ಸೊನ್ನೆ ತಪ್ಪಾಗಿರಬೇಕು, ಅಥವಾ 2 ತಪ್ಪಾಗಿರಬೇಕು ಎಂದೆ. ಆದರೂ ನಾನು ಆರೋಪವನ್ನು ಒಪ್ಪಿಕೊಳ್ಳುತ್ತೇನೆ'. ದಶಕಗಳಿಂದ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿಯವರ ಬಟ್ಟೆಯ ಬಗ್ಗೆ ಟೀಕಿಸುತ್ತಲೇ ಇದ್ದಾರೆ. ಇತ್ತೀಚೆಗೆ ರಾಹುಲ್‌ ಗಾಂಧಿಯವರು ₹1.6 ಲಕ್ಷ ಸಂಬಳ ತೆಗೆದುಕೊಂಡರೂ ದುಬಾರಿ ಬಟ್ಟೆಯನ್ನು ಧರಿಸುತ್ತಾರೆ ಎಂದು ಮೋದಿ ಆರೋಪಿಸಿದ್ದಾರೆ

Author Image

Advertisement