For the best experience, open
https://m.bcsuddi.com
on your mobile browser.
Advertisement

22 ವರ್ಷದ ದತ್ತು ಮಗನನ್ನೇ ಮದುವೆಯಾದ 53 ವರ್ಷದ ಮಹಿಳೆ

09:09 AM Nov 02, 2023 IST | Bcsuddi
22 ವರ್ಷದ ದತ್ತು ಮಗನನ್ನೇ ಮದುವೆಯಾದ 53 ವರ್ಷದ ಮಹಿಳೆ
Advertisement

ಮಾಸ್ಕೋ: 53 ವರ್ಷದ ಮಹಿಳೆಯೊಬ್ಬಳು ತಾನು ಸಾಕಿ ಬೆಳೆಸಿದ ದತ್ತು ಮಗನನ್ನೇ ಮದುವೆಯಾಗಿದ್ದಾಳೆ. ಹೌದು. ರಷ್ಯಾದಲ್ಲಿ ಇಂತಹ ವಿಚಿತ್ರ ಮದುವೆ ನಡೆದಿದೆ. ಸಂಗೀತ ಶಿಕ್ಷಕಿ ಮತ್ತು ಗಾಯಕಿ ಐಸಿಲು ಚಿಝೆವ್ಸ್ಕಯಾ ಮಿಂಗಲಿಮ್ (53) ಅವರು ಡೇನಿಯಲ್ ಚಿಜೆವ್ಸ್ಕಿ (22) ಅವರನ್ನು ದತ್ತು ಪಡೆದ ಎಂಟು ವರ್ಷಗಳ ನಂತರ ಅಕ್ಟೋಬರ್‌ನಲ್ಲಿ ವಿವಾಹವಾಗಿದ್ದಾರೆ. ನೈರುತ್ಯ ರಷ್ಯಾದ ನಗರವಾದ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೇನಿಯಲ್ 13 ವರ್ಷದವಳಿದ್ದಾಗ ಐಸಿಲು ಚಿಝೆವ್ಸ್ಕಯಾ ಮಿಂಗಲಿಮ್ ಅವರು ಅನಾಥಾಶ್ರಮದಲ್ಲಿ ಭೇಟಿಯಾದರು. ಅಲ್ಲಿ ಅವರು ಸಂಗೀತ ಶಿಕ್ಷಕಿಯಾಗಿದ್ದರು. ಡೇನಿಯಲ್‌ನನ್ನು ದತ್ತು ಪಡೆದ ಐಸಿಲು ಚಿಝೆವ್ಸ್ಕಯಾ ಮಿಂಗಲಿಮ್ ಇದೀಗ ಮದುವೆಯಾಗಿದ್ದಾಳೆ. ಇದೀಗ ಆಕೆ ಮಾಸ್ಕೋಗೆ ಪಲಾಯನ ಮಾಡಲು ಯೋಜಿಸುತ್ತಾಳೆ.

Author Image

Advertisement