For the best experience, open
https://m.bcsuddi.com
on your mobile browser.
Advertisement

'2026 ರಲ್ಲಿ ದೇಶವನ್ನು ನಕ್ಸಲ್‌ನಿಂದ ಮುಕ್ತಗೊಳಿಸುತ್ತೇವೆ' - ಅಮಿತ್‌ ಶಾ

11:05 AM Aug 25, 2024 IST | BC Suddi
 2026 ರಲ್ಲಿ ದೇಶವನ್ನು ನಕ್ಸಲ್‌ನಿಂದ ಮುಕ್ತಗೊಳಿಸುತ್ತೇವೆ    ಅಮಿತ್‌ ಶಾ
Advertisement

ರಾಯ್ಪುರ: 2026 ರಲ್ಲಿ ದೇಶವನ್ನು ಸಂಪೂರ್ಣವಾಗಿ ನಕ್ಸಲ್‌ನಿಂದ ಮುಕ್ತಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಮಿತ್ ಶಾ ಅವರು ಛತ್ತೀಸಗಡ್‌ ಸಿಎಂ ವಿಷ್ಣು ದೇವ್ ಸಾಯಿ, ಛತ್ತೀಸ್‌ಗಡದ ನೆರೆಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಅಂತರ್ ರಾಜ್ಯ ಸಮನ್ವಯ ಸಭೆಯಲ್ಲಿ ಭಾಗವಹಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮೊದಲ 10 ವರ್ಷಗಳಲ್ಲಿ ಭದ್ರತಾ ಸಿಬಂದಿ ಮತ್ತು ನಾಗರಿಕರು ಸೇರಿ ಒಟ್ಟು 6617 ಮಂದಿ ಹತ್ಯೆಗೀಡಾಗಿದ್ದರು. ಈಗ 70% ಇಳಿಕೆಯಾಗಿದೆ. ನಮ್ಮ ಹೋರಾಟ 2026 ಮಾರ್ಚ್ ವೇಳೆಗೆ ಅಂತಿಮ ಹಂತವನ್ನು ತಲುಪಲಿದೆ ಎಂದು ನಾನು ನಂಬುತ್ತೇನೆ ಎಂದರು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement