For the best experience, open
https://m.bcsuddi.com
on your mobile browser.
Advertisement

2024ರ ನೀಟ್-ಯುಜಿ ಪರೀಕ್ಷೆ ಅಕ್ರಮ ಆರೋಪ - ಕೇಂದ್ರ ಸರ್ಕಾರ, ಎನ್‌ಟಿಎ ಗೆ ಸುಪ್ರಿಂ ನೋಟಿಸ್‌

02:52 PM Jun 14, 2024 IST | Bcsuddi
2024ರ ನೀಟ್ ಯುಜಿ ಪರೀಕ್ಷೆ ಅಕ್ರಮ ಆರೋಪ   ಕೇಂದ್ರ ಸರ್ಕಾರ  ಎನ್‌ಟಿಎ ಗೆ ಸುಪ್ರಿಂ ನೋಟಿಸ್‌
Advertisement

ದೆಹಲಿ: ಪ್ರಶ್ನೆಪತ್ರಿಕೆ ಸೋ ರಿಕೆ ಮತ್ತು ನೀ ಟ್–ಯುಜಿಯಲ್ಲಿನ ಇತರ ಅಕ್ರಮ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ಕೇಂದ್ರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಹಿತನ್ ಸಿಂಗ್ ಕಶ್ಯಪ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀ ಪ್ ಮೆಹ್ತಾ ಅವರ ರಜಾಕಾಲದ ಪೀಠವು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಬಿಹಾರ ಸರ್ಕಾರದಿಂದ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಕೇಳಿದೆ.

ನೀಟ್ -ಯುಜಿಯಲ್ಲಿ ಪರೀಕ್ಷಾ ಸಮಯ ನಷ್ಟಕ್ಕಾಗಿ 1,563 ಅಭ್ಯರ್ಥಿ ಗಳಿಗೆ ಪರಿಹಾರಾತ್ಮಕವಾಗಿ ನೀಡಲಾಗಿದ್ದ ಕೃಪಾಂಕವನ್ನು ಹಿಂಪಡೆಯುವುದಾಗಿ ಕೇಂದ್ರ ಮತ್ತು
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( ಎನ್‌ಟಿಎ ) ಗುರುವಾರ ಸುಪ್ರೀಂ ಕೋರ್ಟ್‌ ಗೆ ತಿಳಿಸಿತ್ತು.

Advertisement

ಈ ಅಭ್ಯರ್ಥಿ ಗಳಿಗೆ ಇದೇ 23ರಂದು ಮರುಪರೀ ಕ್ಷೆ ನಡೆಸಿ, ಇದೇ 30ರಂದು ಫಲಿತಾಂಶ ಪ್ರಕಟಿಸಲಾಗುವುದು. ನಿಗದಿಯಂತೆ ಜುಲೈ 6ರಿಂ ದ ಎಂ ಬಿಬಿಎಸ್, ಬಿಡಿಎಸ್
ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂ ಗ್ ಆರಂಭವಾಗಲಿದೆ ಎಂದು ಕೇಂದ್ರ ತಿಳಿಸಿತ್ತು.

ಮರು ಪರೀಕ್ಷೆ ತೆಗೆದುಕೊಳ್ಳಲು ಬಯಸದ ಅಭ್ಯರ್ಥಿ ಗಳಿಗೆ, ಅವರು ಮೇ 5ರ ಪರೀಕ್ಷೆಯಲ್ಲಿ ಪಡೆದಿರುವ ನೈ ಜ ಅಂಕಗಳನ್ನು (ಕೃಪಾಂ ಕ ಬಿಟ್ಟು) ಗಣನೆಗೆ
ತೆಗೆದುಕೊಳ್ಳಲಾಗುವುದು ಎಂದು ಕೇಂ ದ್ರ ಸರ್ಕಾರ ಹೇಳಿದೆ.

Author Image

Advertisement