For the best experience, open
https://m.bcsuddi.com
on your mobile browser.
Advertisement

2023-24 ನೇ ಸಾಲಿನ ಸಿಬಿಎಸ್ಇ 10ನೇ, 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ

09:15 AM Dec 13, 2023 IST | Bcsuddi
2023 24 ನೇ ಸಾಲಿನ ಸಿಬಿಎಸ್ಇ 10ನೇ  12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ
Advertisement

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) 2023-24 ನೇ ಸಾಲಿನ 10ನೇ, 12ನೇ ತರಗತಿಯ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ. ಇದರ ಅನುಸಾರ ಫೆಬ್ರವರಿ 15 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತದೆ.

10 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 21ರಿಂದ ಪ್ರಾರಂಭವಾಗಿ ಮಾರ್ಚ್ 11 ರ ವರೆಗೆ ಇರಲಿದೆ. ಹಾಗೇ 12 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15 ಏಪ್ರಿಲ್ 1ರ ವರೆಗೆ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

10 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ:

Advertisement

* ಫೆಬ್ರವರಿ 21 - ಹಿಂದಿ

* ಫೆಬ್ರವರಿ 26 - ಇಂಗ್ಲೀಷ್

* ಮಾರ್ಚ್ 2 - ವಿಜ್ಞಾನ

* ಮಾರ್ಚ್ 7 - ಸಮಾಜ ವಿಜ್ಞಾನ

* ಮಾರ್ಚ್ 11 - ಗಣಿತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು

https://adda247jobs-wp-assets-adda247.s3.ap-south-1.amazonaws.com/jobs/wp-content/uploads/sites/2/2023/12/12174254/105933291.pdf ಅಲ್ಲಿ ಪಡೆಯಬಹುದಾಗಿದೆ.

12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ:

* ಫೆಬ್ರವರಿ 19 - ಹಿಂದಿ

* ಫೆಬ್ರವರಿ 22 - ಇಂಗ್ಲೀಷ್

* ಫೆಬ್ರವರಿ 27 - ರಸಾಯನಶಾಸ್ತ್ರ

* ಫೆಬ್ರವರಿ 29 - ಭೂಗೋಳಶಾಸ್ತ್ರ

* ಮಾರ್ಚ್ 4 - ಭೌತಶಾಸ್ತ್ರ

* ಮಾರ್ಚ್ 9 - ಗಣಿತ

* ಮಾರ್ಚ್ 18 - ಅರ್ಥಶಾಸ್ತ್ರ

* ಮಾರ್ಚ್ 19 - ಜೀವಶಾಸ್ತ್ರ

* ಮಾರ್ಚ್ 22 - ರಾಜಕೀಯ ವಿಜ್ಞಾನ

* ಮಾರ್ಚ್ 23 - ಅಕೌಂಟೆನ್ಸಿ

* ಮಾರ್ಚ್ 27 - ವ್ಯಾಪಾರ ಅಧ್ಯಯನ

* ಮಾರ್ಚ್ 28 - ಇತಿಹಾಸ

* ಮಾರ್ಚ್ 30 - ಸಂಸ್ಕೃತ

* ಏಪ್ರಿಲ್ 1 - ಸಮಾಜಶಾಸ್ತ್ರ

* ಏಪ್ರಿಲ್ 2 - ಕಂಪ್ಯೂಟರ್ ಸೈನ್ಸ್ ಗಣಿತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು

https://adda247jobs-wp-assets-adda247.s3.ap-south-1.amazonaws.com/jobs/wp-content/uploads/sites/2/2023/12/12174239/105933262.pdf ಅಲ್ಲಿ ಪಡೆಯಬಹುದಾಗಿದೆ.

Author Image

Advertisement