For the best experience, open
https://m.bcsuddi.com
on your mobile browser.
Advertisement

2 ಕೋಟಿ ಮನೆಗಳನ್ನು ಬಡವರಿಗೆ ನೀಡುವ ಗುರಿಯೇ ‘ಮೋದಿ ಸರ್ಕಾರದ ಗ್ಯಾರಂಟಿ’- ಪ್ರಹ್ಲಾದ್ ಜೋಶಿ

06:39 PM Feb 01, 2024 IST | Bcsuddi
2 ಕೋಟಿ ಮನೆಗಳನ್ನು ಬಡವರಿಗೆ ನೀಡುವ ಗುರಿಯೇ ‘ಮೋದಿ ಸರ್ಕಾರದ ಗ್ಯಾರಂಟಿ’  ಪ್ರಹ್ಲಾದ್ ಜೋಶಿ
Advertisement

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ಬಡವರಿಗೆ ನೀಡುವ ಗುರಿಯೇ ‘ಮೋದಿ ಸರ್ಕಾರದ ಗ್ಯಾರಂಟಿ’ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನೂತನ ಸಂಸತ್ ನಲ್ಲಿ ಮಂಡನೆಯಾದ ಚೊಚ್ಚಲ ಬಜೆಟ್ ನ ಬಗ್ಗೆ ಮಾತನಾಡಿದ ಜೋಶಿ ಅವರು, ದೂರದೃಷ್ಟಿ ಮತ್ತು ಪರಿವರ್ತನಾಶೀಲ, ವಿಕಸಿತ ಭಾರತದ ಬಜೆಟ್ ಇದಾಗಿದ್ದು, ಮಧ್ಯಂತರ ಬಜೆಟ್ ನಲ್ಲಿ ಸರ್ವ ವರ್ಗದ ಅಗತ್ಯ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ ಎಂದರು.

ಇನ್ನು ಬಜೆಟ್ ಮಂಡನೆಯಲ್ಲಿ 7 ಲಕ್ಷ ರೂ. ಆದಾಯ ಇರುವ ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಕೊಟ್ಟು ಬಹು ದೊಡ್ಡ ಕೊಡುಗೆ ನೀಡಿದೆ. ಜೊತೆಗೆ 1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್, ಕಾರ್ಪೋರೇಟ್ ಟ್ಯಾಕ್ಸ್ ಶೇ.22ಕ್ಕೆ ಇಳಿಕೆ, ವಿಮಾನ ನಿಲ್ದಾಣ, ವಿಮಾನಗಳ ಸಂಖ್ಯೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಸೌಲಭ್ಯ ಹೀಗೆ ಸಮತೋಲಿತ ಬಜೆಟ್ ಇದಾಗಿದೆ ಎಂದು ತಿಳಿಸಿದರು

Advertisement

Author Image

Advertisement