ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

2ನೇ ಸಂಬಂಧ ಒಪ್ಪಿಕೊಂಡ ನಟಿ ಜ್ಯೋತಿ ರೈ…!

04:45 PM Oct 02, 2023 IST | Bcsuddi
Advertisement

ಹೈದರಾಬಾದ್ : ಹಾಟ್‌ ಫೋಟೋಸ್ ಗಳನ್ನು ಶೇರ್‌ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಸ್ಯಾಂಡಲ್‌ವುಡ್‌ ತಾರೆ ಜ್ಯೋತಿ ರೈ ಈಗ ಮದುವೆಯ ವಿಷಯವಾಗಿ ಸಕತ್‌ ಸುದ್ದಿಯಲ್ಲಿದ್ದಾರೆ.

Advertisement

ಇದೀಗ ಸುಕು ಪೂರ್ವಜ್‌ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಜ್ಯೋತಿ ರೈ ತಮ್ಮಿಬ್ಬರ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುಕು ಪೂರ್ವಜ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ ಉಂಗುರ ಎಮೋಜಿ ಹಾಕಿದ್ದಾರೆ.ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಸದ್ಯ ಈಗ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಅಲ್ಲೇ ಹೆಚ್ಚು ಹೆಚ್ಚು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆಕೆಯ ‘ಪ್ರೆಟಿ ಗರ್ಲ್’ ವೆಬ್‌ ಸೀರಿಸ್ ಪೋಸ್ಟರ್ ಸಖತ್ ವೈರಲ್ ಆಗ್ತಿದೆ.

ವಿನು ಬಳಂಜ ಅವರ ‘ಬಂದೇ ಬರತಾವ ಕಾಲ’ ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ಬಳಿಕ ಜ್ಯೋತಿ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ, ಕಿನ್ನರಿ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಜ ಮಾತ್ರವಲ್ಲದೆ ಪರಭಾಷೆಯಲ್ಲು ಜ್ಯೋತಿ ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ.

Advertisement
Next Article