ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೋಟೆಲ್‌‌ನಲ್ಲಿ ಹತ್ಯೆಯಾಗಿದ್ದ ಮಾಡೆಲ್ ಶವ ಕಾಲುವೆಯಲ್ಲಿ ಪತ್ತೆ

02:59 PM Jan 13, 2024 IST | Bcsuddi
Advertisement

ನವದೆಹಲಿ: ಗುರ್ಗಾಂವ್ ಹೋಟೆಲ್‌‌ನಲ್ಲಿ ಕಳೆದ ವಾರ ಗುಂಡಿನಿಂದ ಹತ್ಯೆಯಾಗಿದ್ದ ಮಾಡೆಲ್ ದಿವ್ಯಾ ಪಹುಜಾ ಅವರ ಮೃತ ದೇಹ ಹರ್ಯಾಣದ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ದಿವ್ಯಾ ಪಹುಜಾ ಅವರ ಮೃತ ದೇಹವನ್ನು ಪಂಜಾಬ್ ನ ಭಖ್ರಾ ಕಾಲುವೆಗೆ ಮೃತದೇಹವನ್ನು ಎಸೆಯಲಾಗಿತ್ತು. ಆದರೆ ದೇಹವು ಪಕ್ಕದ ರಾಜ್ಯಕ್ಕೆ ಹರಿದು ಹೋಗಿದೆ ಎಂದು ತಿಳಿಸಿದ್ದಾರೆ.

ಇನ್ನು ಹರ್ಯಾಣದ ತೊಹ್ನಾದಲ್ಲಿ ಗುರ್ಗಾಂವ್ ಪೊಲೀಸರ ತಂಡವು ಮೃತದೇಹವನ್ನ ಪತ್ತೆ ಮಾಡಿದ್ದು, ಪೊಲೀಸರು ಮೃತದೇಹದ ಫೋಟೊಗಳನ್ನು ಪಹುಜಾ ಕುಟುಂಬಿಕರಿಗೆ ಕಳುಹಿಸಿದ್ದಾರೆ. ಅವರು ಗುರುತು ಪತ್ತೆ ಮಾಡಿದ ಬಳಿಕ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.

ಜನವರಿ 2ರಂದು ಮಾಡೆಲ್ ದಿವ್ಯಾ ಪಹುಜಾ ಕೊಲೆಯಾಗಿದ್ದು, ಜನವರಿ 3ರಂದು ಮೃತದೇಹವನ್ನು ಪಂಜಾಬ್ ಕಾಲುವೆಯಲ್ಲಿ ಎಸೆದಿರುವುದಾಗಿ ಪ್ರಕರಣದ ಆರೋಪಿಗಳಲ್ಲಿ ಓರ್ವ ಶುಕ್ರವಾರ ಹೇಳಿಕೊಂಡಿದ್ದ.

ದಿವ್ಯಾಳನ್ನು ಐವರು ಪುರುಷರು ಹೋಟೆಲ್ ಕೋಣೆಗೆ ಕರೆದುಕೊಂಡುಹೋಗಿ ಹೋಟೆಲ್ ಮಾಲೀಕನ ಅಶ್ಲೀಲ ಚಿತ್ರಗಳೊಂದಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ತಲೆಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Next Article