ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೋಟೆಲ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡಲು ಕೇಂದ್ರ ಸರ್ಕಾರದ ಲೈಸೆನ್ಸ್ ಕಡ್ಡಾಯ

10:18 AM Jun 19, 2024 IST | Bcsuddi
Advertisement

ಬೆಂಗಳೂರು: ಹೋಟೆಲ್, ಪಬ್, ಡಿನ್ನರ್ ಹಾಲ್‌ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡುವುದು ಸರ್ವೇಸಾಮಾನ್ಯ. ಇದೀಗ ಈ ಮ್ಯೂಸಿಕ್ ಪ್ಲೇ ಮಾಡಲು ಲೈಸೆನ್ಸ್ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Advertisement

ಹೋಟೆಲ್, ಪಬ್, ಡಿನ್ನರ್ ಹಾಲ್‌ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡಲು ಪಿಪಿಎಲ್(ಪಬ್ಲಿಕ್ ಫರ್ಫಾಮೆನ್ಸ್ ಲೈಸೆನ್ಸ್) ಲೈಸೆನ್ಸ್ ಪಡೆದುಕೊಳ್ಳಬೇಕು. ಅದರಲ್ಲೂ ತ್ರೀ ಸ್ಟಾರ್ ಹಾಗೂ ಫೈ ಸ್ಟಾರ್ ಹೋಟೆಲ್ ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡಲು ಲೈಸೆನ್ಸ್ ಪಡೆಯುವುದಂತೂ ಕಡ್ಡಾಯವಾಗಿದೆ. ಈ ಲೈಸೆನ್ಸ್ ನ್ನು ಒಂದು ವರ್ಷಕ್ಕೊಮ್ಮೆ ರಿನಿವಲ್ ಮಾಡಿಸಿಕೊಳ್ಳುತ್ತಿರಬೇಕು. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನ ಈ ಲೈಸೆನ್ಸ್ ಗೆ ನಿಗದಿ ಪಡಿಸಲಾಗಿದೆ.

ಕೇಂದ್ರ ಸರ್ಕಾರ ಮ್ಲೂಸಿಕ್ ಪ್ಲೇ ಮಾಡಲು ಲೈಸೆನ್ಸ್ ಕಡ್ಡಾಯ ಮಾಡಿರುವುದಕ್ಕೆ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದೆ. ಹೋಟೆಲ್ ಮಾಡುವಾಗಲೇ ನಾವು ಲೈಸೆನ್ಸ್ ಪಡೆದಿರುತ್ತೇವೆ. ಈ ಮಧ್ಯೆ ಮ್ಯೂಸಿಕ್ ಪ್ಲೇ ಮಾಡಲೂ ಲೈಸೆನ್ಸ್ ಪಡೆದುಕೊಳ್ಳಬೇಕೆಂದರೆ ಕಷ್ಟ. ಲೈಸೆನ್ಸ್ ಬೆಲೆಯನ್ನು ಕೂಡ 1 ಲಕ್ಷಕ್ಕೂ ಹೆಚ್ಚು ಹಣವನ್ನ ನಿಗಧಿ ಮಾಡಲಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಲೈಸೆನ್ಸ್ ಆದೇಶ ಕ್ಯಾನ್ಸಲ್ ಮಾಡಬೇಕು. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಬಹಳ ಪರಿಣಾಮ ಬೀರಲಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಹೋಟೆಲ್ ಮಾಲೀಕರು ಉತ್ತಮ ಊಟ ತಿಂಡಿಯೊಂದಿಗೆ ಗ್ರಾಹಕರನ್ನು ಸೆಳೆಯಲು ಹೋಟೆಲ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡುತ್ತಾರೆ. ಇದೀಗ ಮ್ಯೂಸಿಕ್ ಪ್ಲೇ ಮಾಡಲೂ ಲೈಸೆನ್ಸ್ ತೆಗೆದುಕೊಳ್ಳಬೇಕು ಎಂದ ಕೇಂದ್ರದ ಆದೇಶವು ಹೋಟೆಲ್ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ.

Advertisement
Next Article