For the best experience, open
https://m.bcsuddi.com
on your mobile browser.
Advertisement

ಹೊಸ ವರ್ಷದ ಸಂಭ್ರಮಾಚರಣೆಯ ದಿನ ಎಷ್ಟು ಮದ್ಯ ಸೇಲ್ ಆಗಿದೆ ಗೊತ್ತಾ.!

07:25 AM Jan 02, 2024 IST | Bcsuddi
ಹೊಸ ವರ್ಷದ ಸಂಭ್ರಮಾಚರಣೆಯ ದಿನ ಎಷ್ಟು ಮದ್ಯ ಸೇಲ್ ಆಗಿದೆ ಗೊತ್ತಾ
Advertisement

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ದಿನವಾದ ಭಾನುವಾರ (ಡಿ. 31) ಒಂದೇ ದಿನ ₹ 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆಯಂತೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.!

ದೇಶೀಯವಾಗಿ ತಯಾರಾದ (ಐಎಂಎಲ್) ಒಟ್ಟು 26.61 ಲಕ್ಷ ಲೀಟರ್ ಮದ್ಯ (3.07 ಲಕ್ಷ ಬಾಕ್ಸ್), 15.21 ಲಕ್ಷ ಲೀಟರ್ ಬಿಯರ್ (1.95 ಲಕ್ಷ ಬಾಕ್ಸ್) ಮಾರಾಟವಾಗಿದ್ದು, 2023ರಲ್ಲಿ ಮದ್ಯದ ಬೆಲೆ ಹೆಚ್ಚಾದರೂ, ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ 86.04 ಲಕ್ಷ ಲೀಟರ್ ಮದ್ಯ, 39.56 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟವಾಗಿದೆ. ಒಟ್ಟು ₹3,496 ಕೋಟಿ ಹೆಚ್ಚುವರಿ ಮಾರಾಟ ನಡೆದಿದೆ. 2022ರಲ್ಲಿ ₹26,982 ಕೋಟಿ ಮೌಲ್ಯದ ಮಾರಾಟ ನಡೆದಿತ್ತು. 2023 ₹30,620 ಕೋಟಿಗೆ ತಲುಪಿದೆ. !

Advertisement

Tags :
Author Image

Advertisement