For the best experience, open
https://m.bcsuddi.com
on your mobile browser.
Advertisement

ಹೊಸ ರೇಶನ್ ಕಾರ್ಡಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ..!

11:43 AM Feb 22, 2024 IST | Bcsuddi
ಹೊಸ ರೇಶನ್ ಕಾರ್ಡಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ
Advertisement

ರಾಜ್ಯದ್ಯಂತ ತಾತ್ಕಾಲಿಕವಾಗಿ ಸದ್ಯಕ್ಕೆ ಸ್ಥಗಿತವಾಗಿರುವ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ(Ration card) ವಿವರಣೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ಗುರುವಾರ ವಿಧಾನಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಈ ಕುರಿತು ಸದನಕ್ಕೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದರೆ.

ಬಹುತೇಕ ಕಳೆದ 8-10 ತಿಂಗಳಿನಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಯಾವುದೇ ಬಗ್ಗೆಯ ಹೊಸ ರೇಷನ್ ಕಾರ್ಡಅನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರಲ್ಲಿಲ್ಲ ಈ ಬಗ್ಗೆ ಸಾರ್ವಜನಿಕರಲ್ಲಿ ತೀರ್ವ ಅಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕ ಆ‌ರ್.ಅಶೋಕ್ ಮತ್ತಿತರ ಸದಸ್ಯರು ಪ್ರಶ್ನೆ ಮಾಡಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಉತ್ತರ ನೀಡಿದ್ದಾರೆ.

ಏಪ್ರಿಲ್ 1ರಿಂದ ಹೊಸ ಬಿಪಿಎಲ್ ಕಾರ್ಡ ವಿತರಣೆ ಆರಂಭವಾಗಲಿದೆ! ಸಚಿವ ಕೆ.ಎಚ್.ಮುನಿಯಪ್ಪ.

Advertisement

ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ವಿವರಣೆ ಕುರಿತು ಸದನದಲ್ಲಿ ವಿಪಕ್ಷ ನಾಯಕ ಆ‌ರ್.ಅಶೋಕ್ ರವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎಚ್.ಮುನಿಯಪ್ಪರವರು ಪ್ರಸ್ತುತ ಸದ್ಯಕ್ಕೆ ಸ್ಥಗಿತವಾಗಿರುವ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಪುನಃ 1 ಏಪ್ರಿಲ್ 2024 ರಿಂದ ಪ್ರಾರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಗುರುವಾರ ವಿಧಾನಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರೆ.

ಸಧ್ಯ ಪಡಿತರ ಚೀಟಿ ಪಡೆಯಲು 2.95 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಅರ್ಜಿಗಳ ಪರಿಶೀಲಿಸುವ ಕಾರ್ಯವು ಇಲಾಖೆ ಅಧಿಕಾರಿಗಳಿಂದ ಭರದಿಂದ ಸಾಗುತ್ತಿದ್ದು, ಈ ಪ್ರಕ್ರಿಯೆಯು 31 ಮಾರ್ಚ್ 2024ರ ಒಳಗಾಗಿ ಮುಗಿಯಲಿದ್ದು, ಇವುಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲಾಗುವುದು ಎಂದರು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಹ ಅವಕಾಶ!

ಈಗಾಗಲೇ ಸಾರ್ವಜನಿಕರಿಂದ ಹೊಸ ಪಡಿತರ ಚೀಟಿ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿದಾರರಿಗೆ ರೇಶನ್ ಕಾರ್ಡ ವಿತರಣೆ ಮಾಡುವುದರ ಜೊತೆಗೆ ಈ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಮುಗಿದ ಬಳಿಕ ಅಂದರೆ 1 ಏಪ್ರಿಲ್ 2024ರ ನಂತರ ಹೊಸ ಕಾರ್ಡುಗಳಿಗೆ ಅರ್ಜಿಯನ್ನು ಕರೆಯಲಾಗುವುದು. ಎಪಿಎಲ್ ಕಾರ್ಡುಗಳನ್ನು ಸಹ ಜೊತೆ ಜೊತೆಗೇ ವಿತರಿಸುವ ಕೆಲಸ ಆರಂಭವಾಗಲಿದೆ' ಎಂದು ಮುನಿಯಪ್ಪ ಘೋಷಿಸಿದರು.

Author Image

Advertisement